ನವದೆಹಲಿ,ಮೇ 11-ಭಾರತ ಆಕ್ರಮಿತ ಕಾಶ್ಮೀರದವನೆಂದು ಹೇಳಿಕೊಂಡು ಹೊಸ ಪಾಸ್‍ಪೆÇೀರ್ಟ್‍ಗಾಗಿ ವಿನಂತಿಸಿಕೊಂಡಿದ್ದ ವಿದ್ಯಾರ್ಥಿಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ. ಫಿಲಿಪ್ಪೀನ್ಸ್ ನಲ್ಲಿರುವ ಶೇಖ್ ಅತೀಖ್ ಹೊಸ ಪಾಸ್‍ಪೆÇೀರ್ಟ್‍ಗೆ ಅರ್ಜಿ ಸಲ್ಲಿಸಿದ್ದ. ಒಂದು ತಿಂಗಳಾದರೂ ಪಾಸ್ ಪೆÇೀರ್ಟ್ ಬಾರದಿದ್ದಾಗ ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದ. ನಾನು ಜಮ್ಮು ಕಾಶ್ಮೀರದವನು. ಫಿಲಿಪ್ಪೀನ್ಸ್ ನಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದೇನೆ. ಪಾಸ್ ಪೆÇೀರ್ಟ್ ಹಾಳಾಗಿದ್ದರಿಂದ ಹೊಸ ಪಾಸ್ಪೋರ್ಟ್‍ಗೆ ಅರ್ಜಿ ಸಲ್ಲಿಸಿ ತಿಂಗಳಾದರೂ ಸಿಕ್ಕಿಲ್ಲ. ಸಮಸ್ಯೆ ಪರಿಹರಿಸುವಂತೆ ಟ್ವೀಟ್ ಮಾಡಿದ್ದ. ತನ್ನ ಟ್ವಿಟರ್ ಖಾತೆಯಲ್ಲಿ ಸ್ಥಳ ಸೆಟ್ಟಿಂಗ್ಸ್‍ನಲ್ಲಿ ತಾನು ಭಾರತ ಆಕ್ರಮಿತ ಕಾಶ್ಮೀರದವನೆಂದು ಬರೆದುಕೊಂಡಿದ್ದ ಶೇಖ್ ಅತೀಖ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ನೀವು ಜಮ್ಮು-ಕಾಶ್ಮೀರದವರಾಗಿದ್ದರೆ, ಸಹಾಯ ಮಾಡುತ್ತೇನೆ. ಆದರೆ ನಿಮ್ಮ ಪೆÇ್ರೀ ನೀವು ಭಾರತ ಆಕ್ರಮಿತ ಕಾಶ್ಮೀರದವರೆಂದು ಬರೆದುಕೊಂಡಿದ್ದೀರ. ಅಂಥ ಸ್ಥಳವೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.