ನಾವು ಸೇವಿಸುವ ಆಹಾರವನ್ನು ಕಿಲೋ ಕ್ಯಾಲೋರಿಯಲ್ಲಿ ಆಧುನಿಕ ಸಂಶೋದಕರು ,ತಙ್ಞರು ಹೇಳುತ್ತರೆ .ನಮಗೆ 1 ದಿನಕ್ಕೆ ಎಷ್ಟು ಕಿಲೋ ಕ್ಯಾಲೋರಿಯು ಶರೀರಕ್ಕೆ ಅವಶ್ಯಕವಾಗಿ ಬೇಕು ಎನ್ನುವುದು ನಮ್ಮ ದೇಹದ ತೂಕ,ನಮ್ಮ ಶರೀರದ ಎತ್ತರದಿಂದ ನಿರ್ಧರಿಸಲಾಗುತ್ತದೆ. ಆದರೆ ನಮ್ಮ ಆಯುರ್ವೇದದ ಶಾಸ್ತ್ರಗಳಲ್ಲಿ ನಮ್ಮ ಯುಕ್ತಿ ಅನುಸಾರವಾಗಿ ನಾವು ಯಾವ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸ ಬೇಕು ಎಂದು ನಮಗೆ ಅತಿ ಸರಳವಾಗಿ ತಿಳಿಸಿಕೋಟ್ಟಿದ್ದಾರೆ.
ಮನುಷ್ಯ ತಾನು ತಿನ್ನುವ ಪ್ರಮಾಣನ್ನು ಮೂದಲು ಗುರಿತಿಸಿಕೋಳ್ಳಬೇಕು-
ನಾವು ನಮ್ಮ ಹೋಟ್ಟೆಯ 1 ಭಾಗವನ್ನು ನೀರಿನಿಂದ ತುಂಬಿಸಿಕೂಂಡು, 1 ಭಾಗ ಗಾಳಿ(ಅಂದರೆ ಕಾಲಿಯಾಗಿರಿಸಿ)ಬೇಕು, ಮಿಕ್ಕ 2 ಭಾಗ ಆಹಾರ ಸೇವನೆಗಾಗಿ ಕಾಲಿ ಇಡಬೇಕು.
ನಾವು ಸೇವಿಸುವಂತಹ ಆಹಾರವನ್ನು 6 ವಿಧಳಾಗಿ ವಿಂಗಡಿಸಬಹುದು-
1.ಚೂಶ್ಯ – ಹೀರಿ ಸೇವಿಸುವಂತಹ ಪದಾರ್ಥವನ್ನು ಚೂಶ್ಯವೆಂದು ಕರೆಯುತ್ತಾರೆ. ಉದಾಹರಣೆ: ಕುಬ್ಬು.
2. ಪೇಯ -ಕುಡಿದು ಸೇವಿಸುವಂತಹ ಪದಾರ್ಥವನ್ನು ಪೇಯವೆಂದು ಕರೆಯುತ್ತಾರೆ . ಉದಾಹರಣೆ : ಹಾಲು,ಪಾನಕ ಇತ್ಯಾದಿ.
3. ಲೇಹ್ಯ- ಆಹಾರ ಪದಾರ್ಥದಲ್ಲಿ ಯಾವುದನ್ನು ನಾವು ನಾಲಿಗೆಯಲ್ಲಿ ನೆಕ್ಕಿ ಸೇವಿಸುತ್ತೆವೊ ಅದನ್ನು ಲೇಹ್ಯ ವೆನ್ನುತ್ತೆವೆ. ಉದಾಹರಣೆ :ಗಟ್ಟಿ ಮೂಸರು.
4. ಭೋಜ್ಯ- ಯಾವ ಆಹಾರ ಪದಾರ್ಥವನ್ನು ನಾವು ಹಲ್ಲಿನೊಂದ ಕಚ್ಚಿ ತಿನ್ನುತ್ತೇವೋ ಅದನ್ನು ಭೋಜ್ಯವೆಂದು ಹೇಳುತ್ತೇವೆ. ಉದಾಹರಣೆ : ಅನ್ನ
5. ಭಕ್ಷ್ಯ- ಯಾವ ಆಹಾರವನ್ನು ನಾವು ಹಲ್ಲಿನ ಸಹಾಯದಿಂದ ಎಳೆದು ನಂತರ ಅಗಿದು ತಿನ್ನುತೇವೂ ಅದನ್ನು ಭಕ್ಷ್ಯವೆನ್ನುತ್ತಾರೆ. ಉದಾಹರಣಿ ; ಮೂದಕ,ರೂಟ್ಟಿ.
6. ಚವ್ರ್ಯ – ಚೆನ್ನಾಗಿ ಅಗಿದು ತಿನ್ನಬೇಕಾದ ಗಟ್ಟಿ ಪದಾರ್ಥ. ಉದಾಹರಣೆ : ,ಹುರಗಾಳು,ಕಡಲೇಕಾಯಿ, ಭಾದಾಮಿ.
ಈ ಮೇಲೆ ಹೇಳಿರುವ 6 ವಿದವಾದ ಆಹಾರನ್ನು ಯಾವುದನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎನ್ನುವ ವಿಧಿ ನಮ್ಮ ಆಯುರ್ವೇದದ ಆಚಾರ್ಯರು ಹೀಗೆ ತಿಳಿಸಿದ್ದಾರೆ.
ಚೂಶ್ಯ ಮತ್ತು ಪೇಯಗಳನ್ನು ಹೂಟ್ಟೆ ತುಂಬುವಷ್ಟು ಪ್ರಮಾಣದಲ್ಲಿ ಸ್ವೀಕರಿಸಬಹುದು, ಅದೆ ಲೇಹ್ಯ ಮತ್ತು ಭೋಜ್ಯವನ್ನು ನಮ್ಮ ಹೋಟ್ಟೆ ತುಂಬಿತು ಎಂದು ಹೇಳುತ್ತಿವಲ್ಲ,ಅದರ ಅರ್ಧ ಪ್ರಮಾಣದಷ್ಟು ಸೇವಿಸಬೇಕು ಎಂದರೆ ನಮ್ಮ ಹೊಟ್ಟೆಗೆ ಹಿಡಿಸುವ ಅರ್ಧ ಪ್ರಮಾಣ ಹಾಗು ಭಕ್ಷ್ಯ ಹಾಗು ಚವ್ರ್ಯವನ್ನು ನಾವು ಸೇವಿಸುವ ಭೂಜ್ಯ ಹಾಗು ಲೇಹ್ಯ ಪದಾರ್ಥದಲರ್ಧ ಭಾಗ. ಹೀಗೆ ವ್ಯಕ್ತಿತನುಗುಣವಾಗಿ ಮತ್ತು ಜಠರಾಗ್ನಿ ಬಲಾನುಸಾರ ನಮ್ಮ ಭೋಜನ ಪದಾರ್ಥದ ಪ್ರಮಾಣವನ್ನು ನಾವು ಗುರುತಿಸಿಕೊಳ್ಳಬೇಕು.
ಲೇಖಕರು
ಡಾ.ಸಿಂಧು ಪ್ರಶಾಂತ್
ಬಿ ಏ ಎಂ ಎಸ್, ಎಮ್.ಡಿ (ಆಲ್‍ಟರ್ನೇಟಿವ್ ಮೆಡಿಸನ್), ಎಮ್.ಎಸ್ಸಿ(ಯೋಗ) ಹಾಗು “ನೃತ್ಯ ಪ್ರಾರ್ಥನಾ” ಎಂಬ ಭರತನಾಟ್ಯದ ಸಂಸ್ಥೆಯ ಸ್ಥಾಪಕಿ
ಮೊಬೈಲ್ ಸಂಖ್ಯೆ 9743857575