ಕನಕಪುರ, ಮೇ 11-ಕರ್ತವ್ಯ ನಿಮಿತ್ತ ಬೆಂಗಳೂರಿನಿಂದ ಬಾಗಲಕೋಟೆಗೆ ಹೋಗುವಾಗ ಪೆÇಲೀಸ್ ಜೀಪ್ ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಸಿಐಡಿ ಡಿವೈಎಸ್ಪಿ ಬಾಳೇಗೌಡರ ಅಂತ್ಯಕ್ರಿಯೆ ಕನಕಪುರ ತಾಲ್ಲೂಕು ಸ್ವಗ್ರಾಮ ಕೆಬ್ಬಳ್ಳಿಯಲ್ಲಿ ಇಂದು ನೆರವೇರಿತು.
ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಬಾಳೇಗೌಡರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ತುಮಕೂರು ಮತ್ತು ಬೆಂಗಳೂರು ತಮ್ಮ ವಾಸದ ಬಡಾವಣೆಯ ಜನರು ಅಂತಿಮ ದರ್ಶನ ಪಡೆದ ನಂತರ ಕನಕಪುರ ತಾಲ್ಲೂಕಿನ ಸ್ವಗ್ರಾಮ ಕೆಬ್ಬಳ್ಳಿಯಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆಗೊಳಿಸಲಾಗಿತ್ತು.
ಮೃತ ಡಿವೈಎಸ್ಪಿ ಬಾಳೇಗೌಡರು ಕನಕಪುರ ತಾಲ್ಲೂಕಿನವರಾಗಿ ಪೆÇಲೀಸ್ ಇಲಾಖೆಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಗೆ ಅನೇಕ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಮುಖ್ಯಮಂತ್ರಿಗಳ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಇಲಾಖೆಯಲ್ಲಿ ತಮ್ಮದೇ ಆದ ಹೆಸರುಗಳಿಸಿ ಪ್ರಸ್ತುತ ಸಿಐಡಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗ, ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ತಾಲ್ಲೂಕು ಜನತೆ ಇವರ ನಿಧನಕ್ಕೆ ಅಪಾರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕುಣಿಗಲ್ ವರದಿ:
ಇದಕ್ಕೂ ಮೊದಲು ಕುಣಿಗಲ್ ಪಟ್ಟಣದಲ್ಲಿ ಬಾಳೇಗೌಡರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಜಿಕೆಬಿಎಂಎಸ್ ಶಾಲಾ ಮೈದಾನದ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಸಾರ್ವಜನಿಕರು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ಮೃತರ ಅಂತಿಮ ದರ್ಶನ ಪಡೆದರು.
ತಾಲ್ಲೂಕಿನಲ್ಲಿ ಏಳು ವರ್ಷಗಳ ಕಾಲ ಪಿಎಸ್ಐ ಹಾಗೂ ಸಿಪಿಐ ಆಗಿ ಸೇವೆ ಸಲ್ಲಿಸಿ ಜನಮಾನಸದಲ್ಲಿ ಮನೆ ಮಾಡಿದ್ದ ಬಾಳೇಗೌಡರ ಸಾವಿನ ಸುದ್ದಿ ತಿಳಿದ ಕೂಡಲೇ ತಾಲ್ಲೂಕಿನಾದ್ಯಂತ ಹಲವು ಸಂಘಟನೆಗಳು ಬಾಳೇಗೌಡರ ಭಾವಚಿತ್ರವಿಟ್ಟು ಶ್ರದ್ದಾಂಜಲಿ ಸಲ್ಲಿಸಿದವು.
ಇದಕ್ಕೂ ಮೊದಲು ತುಮಕೂರಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಮುಂಭಾಗ ಆ್ಯಂಬುಲೆನ್ಸ್ನಲ್ಲೇ ಅಂತಿಮ ದರ್ಶನಕ್ಕಿಡಲಾಗಿತ್ತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಡಿವೈಎಸ್ಪಿ ನಾಗರಾಜ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ಅಂತಿಮ ದರ್ಶನ ಪಡೆದರು.