ಮಹಿಳೆಯೊಬ್ಬಳು ದೇವಸ್ಥಾನದಲ್ಲಿ ದೇವಿಯ ಮುಂದೆಯೇ ತನ್ನ ನಾಲಿಗೆ ಕತ್ತರಿಸಿ ಕೊಟ್ಟಿದ್ದಾಳೆ!

ಭೋಪಾಲ್ ,ಮೇ 11- ಸೀರೆ ಕೊಡುತ್ತೇನೆ, ಉರುಳುಸೇವೆ ಮಾಡುತ್ತೇನೆ, ತಾಳಿ ಕೊಡುತ್ತೇನೆ ಎಂದೆಲ್ಲಾ ಹರಕೆ ಹೊರುವ ಮಹಿಳೆಯರನ್ನು ಕಂಡಿದ್ದೇವೆ. ಇಲ್ಲೊಬ್ಬ ಭಕ್ತೆ ದೇವಿಗೆ ತನ್ನ ನಾಲಿಗೆಯನ್ನು ಅರ್ಪಿಸಿದ್ದಾಳಂತೆ.ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ತರ್ಸಮಾ ಗ್ರಾಮ 45 ವರ್ಷದ ಮಹಿಳೆಯೊಬ್ಬಳು ದೇವಸ್ಥಾನದಲ್ಲಿ ದೇವಿಯ ಮುಂದೆಯೇ ತನ್ನ ನಾಲಿಗೆ ಕತ್ತರಿಸಿ ಕೊಟ್ಟಿದ್ದಾಳೆ. ಮಹಿಳೆ ಪ್ರತಿನಿತ್ಯ ಬಿಜಾಸನ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಎಂದಿನಂತೆ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಏಕಾಏಕಿ ದೇವಿಯ ಮುಂದೆ ತನ್ನ ನಾಲಗೆಯನ್ನು ಕತಕ್ತರಿಸಿಕೊಂಡು ಭಕ್ತಿಯ ಪರಾಕಷ್ಟೆ ಮೆರೆದಿದ್ದಾಳೆ.  ನಮ್ಮ ಮದುವೆಯಾದಗಿನಿಂದ ಪ್ರತಿ ದಿನ ಎರಡು ಬಾರಿ ದೇವಸ್ಥಾನಕ್ಕೆ ಬಂದು ಬಿಜಾಸನ ಮಾತೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಳು, ನನ್ನ ಪತ್ನಿ ದೇವಿಯನ್ನು ತುಂಬಾ ನಂಬುತ್ತಾಳೆ. ಆಕೆಯ ಪತಿ ಹೇಳಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ