ಶಾತಿಯುತ ಮತದಾನ ನಡೆಯುವಂತೆ ಕಟ್ಟೆಚ್ಚರ; ಚುನಾವಣಾ ಭದ್ರತೆಗೆ ಪೊಲೀಸ್ ಇಲಾಖೆ ಸಜ್ಜು: ಡಿಜಿ ಮತ್ತು ಐಜಿಪಿ ನೀಲಮಣಿ ಎನ್‌ ರಾಜು 

ಬೆಂಗಳೂರು:ಮೆ-೧೧: ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುವಂತೆ ಹಾಗೂ  ಚುನಾವಣೆಯ ಭದ್ರತೆಗೆ ಪೊಲೀಸ್ ಇಲಾಖೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ ಎಂದು ಡಿಜಿ ಮತ್ತು ಐಜಿಪಿ ನೀಲಮಣಿ ಎನ್‌ ರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಭದ್ರತೆ ಕೈಗೊಳ್ಳುವ ನಿಟ್ಟಿನಲ್ಲಿ ಜನವರಿಯಿಂದಲೇ ಸಿದ್ದತೆ ಮಾಡಿಕೊಂಡಿದ್ದು, ಅಧಿಸೂಚನೆಗೂ ಮುನ್ನ ಹಲವು ಬಾರಿ ಸಭೆಗಳನ್ನು ನಡೆಸಿದ್ದೇವೆ ಎಂದರು.

ಭದ್ರತೆಗೆ ರಾಜ್ಯದ ಪೊಲೀಸರ ಜೊತೆಗೆ ಕೇಂದ್ರದ ತುಕಡಿಗಳು,585 ಕೇಂದ್ರ ಮೀಸಲು ಪಡೆ ತುಕಡಿಗಳು,ಛತ್ತೀಸ್‌ಘಡ, ಗೋವಾ,ಮಹಾರಾಷ್ಟ್ರದ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ತಮಿಳು ನಾಡು  ಪೊಲೀಸರನ್ನು ಭದ್ರತೆಗೆ ಬಳಿಕೊಳ್ಳುತ್ತಿದ್ದೇವೆ. 22 ಸಾವಿರ ಗೃಹ ರಕ್ಷಕ ದಳದ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 82,157 ಸಿಬಂದಿಗಳು ಬೂತ್‌ಗಳ ಭದ್ರತೆಗೆ ನಿಯೋಜಿಸಿದ್ದೇವೆ. ಕಾರಾಗೃಹ, ಅಗ್ನಿ ಶಾಮಕ ದಳದ ಸಿಬಂದಿಗಳೂ ಭದ್ರತೆ ಗಾಗಿ ಕೆಲಸ ನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ಲೋಕಾಯುಕ್ತ ಇಲಾಖೆಯನ್ನು ಭದ್ರತೆಗೆ ಬಳಸಿಕೊಳ್ಳುತ್ತಿದ್ದೇವೆ ಎಂದರು.

ಗಡಿ ಭಾಗಗಳಲ್ಲಿ ಗಡಿ ರಾಜ್ಯಗಳ ಪೊಲೀಸರ ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿದೆ. ಸ್ಕ್ವಾಡ್‌ ರೂಂಗಳ ಸುರಕ್ಷತೆಗೆ ಕೇಂದ್ರ ಮೀಸಲು ಪಡೆ ಯನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಸಾವಿರ ಸಿಐಎಸ್‌ಎಫ್ ಸಿಬಂದಿಗಳು ಭತ್ರತೆಗೆ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಸೇರಿ 1 ಲಕ್ಷಕ್ಕೂ ಹೆಚ್ಚು ಸಿಬಂದಿ ಭದ್ರತಾ ಕರ್ತವ್ಯದಲ್ಲಿದ್ದಾರೆ. ಅರೆಸೇನಾ ಪಡೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ