ಚಿತ್ರದುರ್ಗ: ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿ ವಿರೇಂದ್ರ ಪಪ್ಪಿ ವಾಸವಿರುವ ತರಳಬಾಳು ನಗರದ ನಿವಾಸದ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಲಾಗಿದ್ದು, ಜಯಂತ್ ನೇತೃತ್ವದ ಎಫ್ ಎಸ್ ಟಿ ಟೀಮ್ ನಿಂದ ದಾಳಿ ಮಾಡಿ ಪರಿಶೀಲಿಸಲಾಯಿತು.
ತದನಂತರ ನಿವಾಸಕ್ಕೆ ಐಟಿ ಅಧಿಕಾರಿಗಳ ತಂಡವೊಂದು ದಾಳಿಯನ್ನು ಮುಂದುವರೆಸಿತು. ಚುನಾವಣಾ ಅಕ್ರಮ ಮಾಹಿತಿ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದರು. ಆದರೆ ಮನೆಯ ಮುಂಭಾಗದಲ್ಲಿ ಚಿತ್ರೀಕರಿಸಲು ಹೋದ ಮಾಧ್ಯಮದವರನ್ನು ಚಿತ್ರೀಕರುಸದಂತೆ ನಿಬಂಧನೆ ಹಾಕಿ ಮಾಧ್ಯಮದವರಿಗೆ ಬೆದರಿಕೆಯನ್ನು ಹಾಕಿದ್ದಾರೆ.
ಪಪ್ಪಿಯ ಈ ವರ್ತನೆಯು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.