
ವಾಷಿಂಗ್ಟನ್, ಮೇ 10-ಪಾಕಿಸ್ತಾನದ ಪರಮಾಣು ವಿಜ್ಞಾನಿಗಳು ಮತ್ತು ಭಯೋತ್ಪಾದಕರ ನಡುವೆ ಗಾಢ ನಂಟು ಬೆಳೆದಿರುವ ಬಗ್ಗೆ ಅಮೆರಿಕ ತೀವ್ರ ಆತಂಕ ವ್ಯಕ್ತಪಡಿಸಿದೆ.
ಈ ಬೆಳವಣೆಗೆ ಬಗ್ಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆ ತೀವ್ರ ನಿಗಾ ವಹಿಸಿದೆ ಎಂದು ಸಿಐಎ ಮುಖ್ಯಸ್ಥರಾಗಿ ನಿಯೋಜಿತರಾಗಿರುವ ಜಿನಾ ಹಾಸ್ಪೆಲ್ ಹೇಳಿದ್ದಾರೆ. ಇವರು ಅಮೆರಿಕದ ಸೆಂಟ್ರಲ್ ಇಂಟಲಿಜೆನ್ಸ್ ಎಜೆನ್ಸಿ(ಸಿಐಎ)ಗೆ ಪ್ರಥಂ ಮಹಿಳಾ ನಿರ್ದೇಶಕರಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಿಯೋಜನೆಗೊಂಡಿದ್ದಾರೆ.
ಪಾಕಿಸ್ತಾನದ ಅಣು ತಂತ್ರಜ್ಞಾನ ಪರಿಣಿತರು ಹಾಗೂ ಉಗ್ರಗಾಮಿ ಸಂಘಟನೆಗಳ ಮುಖಂಡರ ನಡುವೆ ನಿಕಟ ಸಂಬಂಧವಿದೆ. ಅಣ್ವಸ್ತ್ರಗಳು ಉಗ್ರರ ಕೈ ಸೇರಬಹುದೆಂಬ ಆತಂಕವೂ ಇದೆ. ಈ ಎಲ್ಲ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸಲಾಗುತ್ತಿದೆ ಎಂದು ಅವರು ಹೇಳಿದ್ಧಾರೆ.