
ಲಕ್ನೋ, ಮೇ 10-ಉತ್ತರ ಪ್ರದೇಶದಲ್ಲಿ ನಿನ್ನೆ ರಾತ್ರಿ ಧೂಳಿನಿಂದ ಕೂಡಿದ ಭಾರೀ ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ಸತ್ತವರ ಸಂಖ್ಯೆ 12ಕ್ಕೇರಿದೆ.
ಇಟವಾದಲ್ಲಿ ನಾಲ್ವರು, ಮಥುರಾದಲ್ಲಿ ಮೂವರು ಹಾಗೂ ಅಗಾ, ಅಲಿಗಢ, ಫಿರೋಜಾಭಾದ್ ಮತ್ತು ಕಾನ್ಪುರ ಗ್ರಾಮಾಂತರ ಹಾಗೂ ಹಾತ್ರಾಸ್ ಪ್ರದೇಶಗಳಲ್ಲಿ ತಲಾ ಒಂದೊಂದು ಸಾವುಗಳು ಸಂಭವಿಸಿದೆ ಎಂದು ಮಾಹಿತಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ.
ಧೂಳಿನಿಂದ ಕೂಡಿದ ಬಿರುಗಾಳಿ ಮತ್ತು ಬಿರುಮಳೆಯಿಂದ ಹಾನಿಗೀಡಾದ ಸ್ಥಳಗಳಲ್ಲಿ ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ವಿತರಿಸುವಂತೆ ಆದೇಶ ನೀಡಲಾಗಿದೆ.
ಮೇ 2 ಮತ್ತು 3ರಂದು ಐದು ರಾಜ್ಯಗಳ ವಿವಿಧ ಭಾಗಗಳಲ್ಲಿ ಭಾರೀ ಬಿರುಗಾಳಿ, ಮಳೆ ಹಾಗೂ ಗುಡುಗು-ಮಿಂಚುಗಳ ಆರ್ಭಟಕ್ಕೆ 140ಕ್ಕೂ ಹೆಚ್ಚು ಮಂದಿ ಮೃತಪಟ್ಟು, 400ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಉತ್ತರ ಪ್ರದೇಶದಲ್ಲೇ 80 ಜನ ಸಾವಿಗೀಡಾಗಿದ್ದರು.