ಬೆಂಗಳೂರು,ಮೇ 10
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ. ಇಷ್ಟು ದಿನ ನಡೆದ ಅಬ್ಬರದ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.
ಸಂಜೆ 5 ಗಂಟೆ ನಂತರ ಯಾವುದೇ ಬಹಿರಂಗ ಸಭೆ, ಸಮಾವೇಶಗಳನ್ನು ನಡೆಸುವಂತಿಲ್ಲ. ಹೀಗಾಗಿ ಅಂತಿಮ ಹಂತದಲ್ಲಾಗುವ ಚುನಾವಣಾ ಅಕ್ರಮ ತಡೆಗಟ್ಟಲು ಎಲ್ಲಾ ಪಕ್ಷಗಳ ಚಟುವಟಿಕೆ ಮೇಲೆ ಆಯೋಗ ಹದ್ದಿನ ಕಣ್ಣಿರಿಸಿದೆ.
ಇನ್ನು ಕಳೆದ 15 ದಿನಗಳಿಂದ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಹೊರ ರಾಜ್ಯದ ನಾಯಕರು, ಸ್ಟಾರ್ ಪ್ರಚಾರಕರು ಕೂಡ ಇಂದು ಸಂಜೆ ನಂತರ ತಮ್ಮ, ತಮ್ಮ ಗೂಡು ಸೇರಬೇಕು. ಹೀಗಾಗಿ ಕರ್ನಾಟಕ ಕುರುಕ್ಷೇತ್ರದ ಕದನ ಕಲಿಗಳು ಇಂದು ಇಡೀ ದಿನ ಅಂತಿಮ ಕಸರತ್ತು ನಡೆಸಲಿದ್ದಾರೆ.
ಕ್ಷೇತ್ರಗಳಲ್ಲಿ ಹೊರಗಿನವರಿಗೆ ಉಳಿಯಲು ಅನುಮತಿ ಇಲ್ಲ. ನಾಳೆ ಒಂದು ದಿನ ಕೊನೆಯದಾಗಿ ಅಭ್ಯರ್ಥಿಗಳಿಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡೋದಕ್ಕೆ ಅವಕಾಶ ಇದೆ.