ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಇದುವರೆಗೆ 70 ಅಬಕಾರಿ ಮೊಕದ್ದಮೆಗಳು:

ಪಿರಿಯಾಪಟ್ಟಣ, ಮೇ 10- ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಇದುವರೆಗೆ 70 ಅಬಕಾರಿ ಸಂಬಂಧಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ತಾಲೂಕು ಚುನಾವಣಾಧಿಕಾರಿ ಆರ್.ಸುಮ ತಿಳಿಸಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ನಾಲ್ಕು ಮಾದರಿ ನೀತಿ-ಸಂಹಿತೆ ಉಲ್ಲಂಘನೆಯ ಪ್ರಕರಣಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಕ್ಷೇತ್ರದಲ್ಲಿ ಈವರೆಗೆ 8.04 ಲಕ್ಷ ದಾಖಲೆ ಅರಿತ 3,67,758 ರೂ. ಮೌಲ್ಯದ 148.890 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೆಬ್‍ಕ್ಯಾಸ್ಟಿಂಗ್ ಮತಗಟ್ಟೆ : ತಾಲೂಕಿನಲ್ಲಿ ಮೇ 12ರಂದು ನಡೆಯುವ ಮತದಾನ ಪ್ರಕ್ರಿಯೆಯನ್ನು ಅಂತರ್ಜಾಲದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡುವ ದೃಷ್ಟಿಯಿಂದ 11 ಮತಗಟ್ಟೆಗಳನ್ನು ವೆಬ್‍ಕ್ಯಾಸ್ಟಿಂಗ್ ಮಾಡಲಾಗುತ್ತಿದೆ. ಮತದಾನದಲ್ಲಿ ಲಿಂಗ ಸಮಾನತೆ ಮತ್ತು ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತಮಪಡಿಸುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಮತಗಟ್ಟೆಯು ಚುನಾವಣಾ, ಪೆÇಲೀಸ್ ಭದ್ರತಾ ಸಿಬ್ಬಂದಿಯೂ ಸೇರಿದಂತೆ ಸಂಪೂರ್ಣ ಮಹಿಳೆಯರಿಂದಲೆ ನಿರ್ವಹಿಸಲ್ಪಡುವ (ಪಿಂಕ್) ಮತಗಟ್ಟೆಯನ್ನು 173 ಕಂಪಲಾಪುರ -2 ಮತಗಟ್ಟೆ ಮತ್ತು ಪಿರಿಯಾಪಟ್ಟಣ ಟೌನ್‍ನಲ್ಲಿ ಇರುವ 180-2 ಮತಗಟ್ಟೆಯನ್ನು ಪಿಂಕ್ ಮತಗಟ್ಟೆಯನ್ನಾಗಿಸಲಿದೆ.
56 ಕ್ರಿಟಿಕಲ್ ಮತಗಟ್ಟೆ : ತಾಲೂಕಿನಲ್ಲಿ ಒಟ್ಟು 56 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆ ಎಂದು ಘೋಷಿಸಲಾಗಿದ್ದು, ಮೂರು ಮತಗಟ್ಟೆಯನ್ನು 179 ಪಿರಿಯಾಪಟ್ಟಣ, 134 ಕಂಪಲಾಪುರ, 112 ಕೊಪ್ಪ ಈ ಮೂರು ಮತಗಟ್ಟೆಗಳನ್ನು ವಲ್ನರಬಲ್ ಮತಗಟ್ಟೆಗಳಾಗಿ ಘೋಷಿಸಲಾಗಿದೆ.
ಅಂಚೆ ಮತದಾನ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ 1105 ಕೋರಿಕೆಗಳು ಮತ್ತು ಇತರೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ 797 ಕೋರಿಕೆಗಳನ್ನು ಸ್ವೀಕರಿಸಲಾಗಿದೆ. ಈಗಾಗಲೆ 960 ಅಂಚೆ ಮತಪತ್ರಗಳನ್ನು ವಿತರಿಸಲಾಗಿದ್ದು, ಎರಡನೆ ಹಂತದ ತರಬೇತಿ ಸಮಯದಲ್ಲಿ 605 ಅಂಚೆ ಮತದಾನವಾಗಿದೆ. 355 ಮತದಾರರಿಗೆ ಅಂಚೆ ಮತಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ ಎಂದು ತಿಳಿಸಿದರು.
ರಜೆ ಘೋಷಣೆ: ಮೇ 12ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ, ಅನುದಾನಿತ, ನಿಗಮಗಳಿಗೆ ರಜೆ ಘೋಷಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ