ಡಿಜ್ವಾಲ್, ಮೇ 9-ಈಶಾನ್ಯ ರಾಜ್ಯ ಮಿಜೋರಾಂ ಪೆÇಲೀಸರು ಚಂಫೈ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ 3.18 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರತ-ಮ್ಯಾನ್ಮಾರ್ ಗಡಿಯ ಹೃಐಕ್ವಾನ್ ತಾಂಡಾದಲ್ಲಿ 9.96 ಕೆಜಿ ತೂಕದ 3.18 ಕೋಟಿ ರೂ. ಮೌಲ್ಯದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಸಿ.ಲಾಲ್ಧೂತ್ಲಂಗಾ ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಚಂಫೈ ಜಿಲ್ಲೆಯ ಚೊಮಹ್ರೌರಿಯ (51) ಎಂಬಾತನನ್ನು ಬಂಧಿಸಲಾಗಿದೆ. ಮ್ಯಾನ್ಮಾರ್ಗೆ ಕಳ್ಳಸಾಗಣೆ ಮಾಡಲು ಚಿನ್ನದ ಗಟ್ಟಿಗಳನ್ನು ಆಗ ಸಂಗ್ರಹಿಸಿಟ್ಟಿದ್ದ ಎಂದು ಪೆÇಲೀಸ್ ಪಿಆರ್ಒ ತಿಳಿಸಿದ್ದಾರೆ.