ಗೌರಿಬಿದನೂರು,ಮೇ9-ಶೋಲೆ ಸಿನಿಮಾದಲ್ಲಿನ ಗಬ್ಬರ್, ಸಾಂಬಾ, ಖಾಲಿಯಾ ಪಾತ್ರದಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕುಮ್ಮಕ್ಕು ನೀಡುತ್ತಿದ್ದಾರೆ. ರೆಡ್ಡಿ ಬ್ರದರ್ಸ್ರಂತಹ ಭ್ರಷ್ಟ ಗಬ್ಬರ್, ಸಂಬಾ, ಖಾಲಿಯಾ ಅವರುಗಳನ್ನು ವಿಧಾನಸೌಧಕ್ಕೆ ಕರೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.
ತಾಲೂಕಿನಲ್ಲಿ ಆಯೋಜಿಸಿದ್ದ ರೋಡ್ ಶೋನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಶಿವಶಂಕರ್ ರೆಡ್ಡಿ ಅವರ ಪರ ಮತಯಾಚನೆ ಮಾಡಿದ ಬಳಿಕ ಮಹಾತ್ಮಾಗಾಂಧಿ ವೃತ್ತದಲ್ಲಿ ಮಾತನಾಡಿದ ಅವರು, ಬಿಜೆಪಿ ಹೊಸ ಟೀಂ ರೆಡಿ ಮಾಡಿಕೊಂಡಿದ್ದೆ. ಸಮಾಜವನ್ನು ಒಡೆಯುವ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವಲ್ಲಿ ಇದು ನಿರತವಾಗಿದೆ ಎಂದು ವ್ಯಂಗ್ಯವಾಡಿದರು.
ಬೇಟಿ ಬಚಾವೊ: ಉತ್ತರ ಪ್ರದೇಶದಲ್ಲಿ ಬಾಲಕಿಯ ಮೇಲೆ ಬಿಜೆಪಿ ಶಾಸಕರೊಬ್ಬರು ಅತ್ಯಚಾರ ಮಾಡಿದ್ದಾರೆ. ಅದರ ಬಗ್ಗೆ ನರೇಂದ್ರ ಮೋದಿ ಅವರು ಏನನ್ನು ಮಾತನಾಡಿಲ್ಲಘಿ. ಈಗ ದೇಶದಲ್ಲಿ ¿ಬೇಟಿ ಬಚಾವೊ..ಭೇಟಿ ಪಡಾವೊ ಸ್ಲೋಗನ್ ಬದಲಾಗಿ ¿ಭೇಟಿ ಬಚಾವೊ..ಬಿಜೆಪಿ ಶಾಸಕರಿಂದ ಬೇಟಿ ಬಚಾವೊ ಎಂಬಂತಾಗಿದೆ. ದೇಶದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಭದ್ರತೆ ಇಲ್ಲದಂತ್ತಾಗಿದೆ. ಕಳೆದ 4 ವರ್ಷಗಳಲ್ಲಿ ಮೋದಿ ಸರಕಾರ ಸಾಧನೆಗಳೇನು ಎಂಬುದನ್ನು ಸ್ಪಷ್ಟ ಪಡಿಸಲಿ ಎಂದು ಸವಾಲೆಸೆದರು.
ಬಿಜೆಪಿ ಮುಖಂಡರಿಗೆ ಕರ್ನಾಟಕದ ಇತಿಹಾಸ ಗೊತ್ತಿಲ್ಲ. ಸಮಾಜವನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಯಾರ ಬಳಿ ವಿಮಾನವಿದೆ. ಹೆಲಿಕಾಪ್ಟರ್ ಇದೆ. ಯಾರು ಸೂಟ್ ಬೂಟ್ ಹಾಕ್ಕೊಂಡು ಬರುತ್ತಾರೊ ಅಂತವರಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಮನೆಯ ಬಾಗಿಲು ದಿನದ 24 ಗಂಟೆಯೂ ತೆರೆದಿರುತ್ತದೆ. ಆದರೆ, ರೈತರಿಗೆ, ಬಡ ಜನರಿಗೆ ಅವರ ಮನೆ ಬಾಗಿಲು ಸದ ಕಾಲ ಮುಚ್ಚಿರುತ್ತದೆ. ಅವರ ಚಿತ್ತ ಏನಿದ್ದರೂ ಕಾಪೆರ್Çೀರೆಟ್ಗಳತ್ತ ಮಾತ್ರ ಎಂದು ವಾಗ್ದಾಳಿ ನಡೆಸಿದರು.
ಆರ್ಎಸ್ಎಸ್-ಬಿಜೆಪಿ ಒಂದೆ ನಾಣ್ಯದ ಎರಡು ಮುಖ ಇದ್ದಂತೆ. ಜನರ ಕಷ್ಟ ಅರಿಯುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿದೆ. ಕಳೆದ 4 ವರ್ಷದಿಂದ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ನುಡಿದಂತೆ ನಡೆದಿಲ್ಲ. ನೀಡಿದ್ದ 200 ಭರವಸೆಗಳಲ್ಲಿ ಯಾವೊಂದನ್ನು ಈಡೇರಿಸಿಲ್ಲ ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಂಸದ ವೀರಪ್ಪ ಮೊಯಿಲಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿಘಿ, ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಶಿವಶಂಕರ್ ರೆಡ್ಡಿ ಸೇರಿದಂತೆ ಮತ್ತಿತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಭಾಷಾಂತರ ಎಡವಟ್ಟು, ಕನ್ನಡ ಕಲಿತ ರಾಗಾ..
ಕಳೆದ ಮೂರ್ನಾಲ್ಕು ತಿಂಗಳಿಂದ ಕರ್ನಾಟಕದಲ್ಲಿ ಪ್ರವಾಸ ಮಾಡಿರುವ ರಾಹುಲ್ ಗಾಂý ಕನ್ನಡ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅವರ ಭಾಷಣವನ್ನು ಕನ್ನಡದಲ್ಲಿ ತರ್ಜುಮೆ ಮಾಡುವಾಗ ತಪ್ಪಾಗಿ ಹೇಳಿದರೆ ಅದು ಹಾಗಲ್ಲ. ಹೀಗೆ ಹೇಳಿ ಅನ್ನುವಷ್ಟರ ಮಟ್ಟಿಗೆ ಕನ್ನಡವನ್ನು ರಾಗಾ ಅರ್ಥ ಮಾಡಿಕೊಳ್ಳುತ್ತಿದ್ದಾರೆ..!
ಗೌರಿಬಿದನೂರಿನಲ್ಲಿ ರಾಹುಲ್ ಗಾಂಧಿ ಅವರ ಭಾಷಣವನ್ನು ಶಾಸಕ ಎಚ್.ಎನ್.ಶಿವಶಂಕರರೆಡ್ಡಿ ಅವರು ತಪ್ಪಾಗಿ ತರ್ಜುಮೆ ಮಾಡಿದರು. ಆಗ ಮಧ್ಯ ಪ್ರವೇಶ ಮಾಡಿದ ರಾಹುಲ್, ಹಾಗಲ್ಲ ಹೀಗೆ ಅಂತಾ ಹೇಳಿ ಎಂದು ಸರಿಪಡಿಸಿದರು. ದೇಶದಲ್ಲಿ ಒಂದು ಘೋಷಣೆ ಆರಂಭವಾಗಿದೆ ಅಂತಾ ರಾಹುಲ್ ಹಿಂದಿಯಲ್ಲಿ ಹೇಳಿದರು. ಆಗ ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದ ಶಿವಶಂಕರರೆಡ್ಡಿ ರಾಜ್ಯದಲ್ಲಿ ಅಂತಾ ಹೇಳಿದಾಗ ರಾಜ್ಯದಲ್ಲಿ ಅಲ್ಲ ದೇಶದಲ್ಲಿ ಎಂದು ರಾಗಾ ಸರಿಪಡಿಸಿದರು. ಪಕ್ಕದಲ್ಲಿದ್ದ ಸಂಸದ ವೀರಪ್ಪ ಮೊಯ್ಲಿ ಪರಮೇಶ್ವರ್ ಕೆಲ ಕಾಲ ಆಶ್ಚರ್ಯ ಚಕಿತರಾಗಿದ್ದರು. ಹೀಗೆ ಒಂದೆರಡು ಕಡೆ ಖುದ್ದು ರಾಹುಲ್ ಗಾಂಧಿ ಅವರೇ ಭಾಷಣವನ್ನು ಸರಿಪಡಿಸಿದರು.