ಮಂಡ್ಯ, ಮೇ 9-ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾಂಡವಪುರ ತಾಲೂಕಿನ ಸುಂಕತೊಣ್ಣೂರು ನಿವಾಸಿ ಕೆಂಗೇಗೌಡ (55) ಮೃತ ದುರ್ದೈವಿ. ಈತ ಕೃಷಿಗಾಗಿ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 7.32 ಲಕ್ಷ ಹಾಗೂ ಖಾಸಗಿಯಾಗಿ 1 ಲಕ್ಷ ರೂ. ಸಾಲ ಮಾಡಿದ್ದರು. ಬ್ಯಾಂಕ್‍ನಿಂದ ಸಾಲ ತೀರಿಸುವಂತೆ ಬಂದ ನೋಟಿಸ್‍ನಿಂದ ಕಂಗಾಲಾಗಿ ಜಮೀನಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.