
ಕೊಪ್ಪಳ,ಮೇ 8
ಅಭಿಮಾನ ಅನ್ನೋದು ಯಾವೆಲ್ಲಾ ರೀತಿಯಲ್ಲಾದರೂ ವ್ಯಕ್ತವಾಗುತ್ತದೆ ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ. ಅದರಂತೆ ಕೊಪ್ಪಳದಲ್ಲೊಬ್ಬ ಅಭಿಮಾನಿ ತನ್ನ ತಲೆಯಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾನೆ.
ನಗರದಲ್ಲಿ ಇಂದು ಮಧ್ಯಾಹ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚುನಾವಣಾ ಬಹಿರಂಗ ಪ್ರಚಾರ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಹಾಗೂ ಬಿಜೆಪಿ ಅಭಿಮಾನಿಯೊಬ್ಬ ತನ್ನ ತಲೆಯಲ್ಲಿ ಮೋದಿ ಎಂದು ಅಕ್ಷರಗಳನ್ನು ಕಟಿಂಗ್ ಮಾಡಿಸಿಕೊಂಡಿದ್ದಾನೆ.
ಯಲಬುರ್ಗಾ ತಾಲೂಕಿನ ಮ್ಯಾದನೇರಿ ಗ್ರಾಮದ ಬಸವರಾಜ ಎಂಬಾತ ತನ್ನ ತಲೆಯಲ್ಲಿ ಮೋದಿ ಎಂದು ಬರೆಸಿಕೊಂಡಿದ್ದಾನೆ. ಈ ರೀತಿ ಕಟಿಂಗ್ ಮಾಡಿದ ವ್ಯಕ್ತಿಯ ಹೆಸರು ಸಹ ಬಸವರಾಜ ಹಡಪದ. ಮೊದಲಿನಿಂದಲೂ ಬಿಜೆಪಿ ಹಾಗೂ ಮೋದಿ ಅಭಿಮಾನಿಯಾಗಿದ್ದು, ತನ್ನ ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಿರುವುದಾಗಿ ಮೋದಿ ಅಭಿಮಾನಿ ಬಸವರಾಜ ತಿಳಿಸಿದ್ದಾನೆ.