ಬೆಂಗಳೂರು, ಮೇ 8- ರಾಜಧಾನಿ ಬೆಂಗಳೂರಿನಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ನಗರ ಪೆÇಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಂದೋಬಸ್ತ್ಗಾಗಿ 44 ಕಂಪೆನಿ ಕೇಂದ್ರ ಪಡೆಗಳು ಆಗಮಿಸಿವೆ.
ಕೇಂದ್ರ ಪಡೆಗಳಲ್ಲಿ ಆರ್ಪಿಎಫ್, ಐಟಿ ಬಿಟಿ, ಬಿಎಸ್ಎಫ್, ಎಸ್ಎಸ್ಬಿ, ಸಿಆರ್ಪಿಎಫ್, ಸಿಐಎಸ್ಎಫ್ ಸೇರಿವೆ.
ಈ ಕೇಂದ್ರ ಪಡೆಗಳನ್ನು ವಿಧಾನಸಭಾ ಕ್ಷೇತ್ರಗಳಿಗೆ ಬಂದೋಬಸ್ತ್ಗಾಗಿ ನಿಯೋಜಿಸಲಾಗಿದ್ದು, ಸ್ಥಳೀಯ ಪೆÇಲೀಸರ ಜತೆ ಸಿಎಆರ್, ಕೆಎಸ್ಆರ್ಪಿ ಫ್ಲಟೂನ್ಗಳನ್ನು ನಿಯೋಜಿಸಲಾಗಿದೆ.
ಪಥ ಸಂಚಲನ: ಮತದಾನದ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಕಡೆ ಇಂದು ಕೇಂದ್ರ ಪಡೆಗಳಿಂದ ಪಥ ಸಂಚಲನ ನಡೆಯಿತು.
ನಗರದ ಡಿಜೆ ಹಳ್ಳಿ, ಕೆಜೆ ಹಳ್ಳಿ, ರಾಜಾಜಿನಗರ, ರಾಜಗೋಪಾಲನಗರ, ಮಾಗಡಿ ರಸ್ತೆ, ಪುಲಕೇಶಿನಗರ, ವಿಜಯನಗರ, ಕೆಎಸ್ ಲೇಔಟ್, ಹೆಣ್ಣೂರು, ಚಾಮರಾಜಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೇಂದ್ರ ಪಡೆಗಳು ಇಂದು ಬೆಳಗ್ಗೆ ಪಥ ಸಂಚಲನ ನಡೆಸಿದವು.
ಕೇಂದ್ರ ಪಡೆಗಳ ಜತೆ ಸ್ಥಳೀಯ ಪೆÇಲೀಸರು ಪಥ ಸಂಚಲನದಲ್ಲಿದ್ದರು.