ಬೀದರ್, ಮೇ 7-ಜನರ ತೆರಿಗೆ ಹಣದಿಂದ ಜೇಬು ತುಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಲೂಟಿ ಮಾಡುತ್ತಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಬಾಲ್ಕಿ ಹೊರವಲಯದ ತಲವಾಡದಲ್ಲಿ ಬಿಜೆಪಿಯ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂನಂತಾಗಿದೆ ಎಂದು ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶ ಶ್ರೀರಾಮನ ಜನ್ಮಸ್ಥಳ ರಾಮನ ಭಕ್ತ ಆಂಜನೇಯನ ರಾಜ್ಯ ಕರ್ನಾಟಕ ಎಂದರು. ಛತ್ರಪತಿ ಶಿವಾಜಿ ಜಯಂತಿ ಮಾಡದ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಟೀಕಿಸಿದರು.






