ತುಮಕೂರು, ಮೇ 7- ಖಾಸಗಿ ಬಸ್ನಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2.98 ಕೋಟಿ ರೂ. ಅಕ್ರಮ ಹಣವನ್ನು ಕ್ಯಾತಸಂದ್ರ ಠಾಣೆ ಪೆÇಲೀಸರು ತಡ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂದು ಕಂಟ್ರೋಲ್ ರೂಂಗೆ ಬಂದ ಅನಾಮಧೇಯ ಕರೆಯಿಂದ ಎಚ್ಚೆತ್ತುಕೊಂಡ ಪೆÇಲೀಸರು ರಾತ್ರಿ 1.30ರ ಸುಮಾರಿನಲ್ಲಿ ಕ್ಯಾತಸಂದ್ರ ಸಮೀಪದ ಜಾಸ್ ಟೋಲ್ ಬಳಿ ನಾಕಾ ಬಂದಿ ಮಾಡಿ ಪ್ರತಿಯೊಂದು ವಾಹನವನ್ನು ತಪಾಸಣೆಗೆ ಕೈಗೊಂಡರು.
ಈ ವೇಳೆ ಖಾಸಗಿ ಬಸ್ನ ಒಳಗೆ ತಪಾಸಣಾಧಿಕಾರಿಗಳು ಬರುತ್ತಿದ್ದಂತೆ ಕೆಲ ಪ್ರಯಾಣಿಕರು ತಬ್ಬಿಬ್ಬಾದರು. ಪ್ರತಿಯೊಂದು ಆಸನ ಮತ್ತು ಲಗ್ಗೇಜ್ಗಳನ್ನು ತಪಾಸಣೆ ಕೈಗೊಂಡಾಗ ಸೀಟ್ ನಂ.18 ಮತ್ತು 19ರ ಕೆಳಗೆ ಎರಡು ದೊಡ್ಡ ಬ್ಯಾಗ್ಗಳು ಪತ್ತೆಯಾಗಿದ್ದು , ಅದರಲ್ಲಿ 500 ಮತ್ತು 2000 ಮುಖ ಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
ಈ ಹಣ ಯಾರಿಗೆ ಸೇರಿದ್ದು ಎಂದು ಪ್ರಯಾಣಿಕರನ್ನು ಕೇಳಿದಾಗ ಯಾರೂ ಸಹ ಇದು ನಮ್ಮದಲ್ಲ , ನಮಗೆ ಗೊತ್ತಿಲ್ಲ ಎಂದರು. ಕೂಡಲೇ ಹಣವನ್ನು ವಶಕ್ಕೆ ಪಡೆದುಕೊಂಡ ಪೆÇಲೀಸರು ಚಾಲಕನನ್ನು ವಿಚಾರಣೆಗೊಳಪಡಿಸಿದ್ದು , ನಮ್ಮ ಬಸ್ನಲ್ಲಿ ಸಿಸಿ ಕ್ಯಾಮೆರಾವಿಲ್ಲ. ತುಮಕೂರು ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದು , ಪಿಕಪ್ ಪಾಯಿಂಟ್ ಆದ ಆನಂದರಾವ್ ವೃತ್ತದ ಬಸ್ ಬುಕಿಂಗ್ ಕಚೇರಿ ಸಮೀಪವು ಸಿಸಿ ಕ್ಯಾಮೆರಾವಿಲ್ಲ. ಈ ಬ್ಯಾಗ್ಗಳನ್ನು ಯಾರು ತಂದಿಟ್ಟಿದ್ದರು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗಕ್ಕೆ ನಾನ್ಸ್ಟಾಪ್ ಬಸ್ ಇದಾಗಿದ್ದು, ತುಮಕೂರಿನಲ್ಲಿ ಮಾತ್ರ ಕೆಲ ನಿಮಿಷ ನಿಲುಗಡೆಗೆ ಅವಕಾಶವಿದೆ. ಈ ಹಣ ತುಮಕೂರಿಗೆ ಸಾಗಿಸಲಾಗುತ್ತಿತ್ತೋ ಅಥವಾ ಶಿವಮೊಗ್ಗಕ್ಕೆ ಸಾಗಿಸಲಾಗುತ್ತಿತ್ತೋ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ.
ಈ ಸಂಬಂಧ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯ ಗೋಪಿನಾಥ್, ಎಎಸ್ಪಿ ಆಶಾ ರಾಣಿ ಹಾಗೂ ಕ್ಯಾತ್ಸಂದ್ರ ಠಾಣೆಯ ಎಸ್ಐ ರಾಜು, ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಶಪಡಿಸಿಕೊಂಡ ಹಣವನ್ನು ತನಿಖೆಗೆ ಒಳಪಡಿಸಿದ್ದಾರೆ.