ಬೀದರ. ಮೇ. 07 ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿಯವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದರು.
ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿಯವರು ನಾನು ಜನರಿಗೋಸ್ಕರ ಕೆಲಸ ಮಾಡುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅಲಿಯಂಬರ್ ಗ್ರಾಮದ ಜನರು ನನಗೆ ಹೆಚ್ಚಿನ ರೀತಿಯಲ್ಲಿ ಮತ ನೀಡಿ ಆಶೀರ್ವದಿಸಬೇಕು ಎಂದರು.
ನೀವು ನನಗಾಗಿ ಕೆಲಸ ಮಾಡಿದರೆ, ನಾನು ನಿಮಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸುತ್ತೇನೆ. ಯಾವುದೇ ಧರ್ಮ, ಜಾತಿ ಪಂಗಡವೆಂದು ಭೇದ ಮಾಡದೇ ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎನ್ನುವಂತೆ ಕೆಲಸ ಮಾಡುತ್ತೇನೆ ಎಂದರು. ಬರುವ ಚುನಾವಣೆಯಲ್ಲಿ ಎಲ್ಲರೂ ಹೆಚ್ಚಿನ ರೀತಿಯಲ್ಲಿ ಮತದಾನ ಮಾಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಉಮಾಕಾಂತ ನಾಗಮಾರಪಳ್ಳಿ, ಜಿ.ಪಂ. ಸದಸ್ಯೆ ತಾರಾಬಾಯಿ ಲಕ್ಷ್ಮಣ ರಾಠೋಡ, ಪಿಕೆಪಿಎಸ್ ಅಧ್ಯಕ್ಷ ಸಂಗಮೇಶ ಪಾಟೀಲ್, ಮಾಜಿ ತಾ.ಪಂ. ಸದಸ್ಯ ದೀಪಕ ಗಾದಗಿ, ಬಿಜೆಪಿ ಕಾರ್ಯದರ್ಶಿ ಪೀರಪ್ಪ ಔರಾದೆ ಯರನಳ್ಳಿ, ಎಪಿಎಮ್‍ಸಿ ಮಾಜಿ ಸದಸ್ಯ ಚಂದ್ರಶೇಖರ ಗಾದಗಿ, ಸಿದ್ಧು ಲೌಟೆ, ಶಿವರಾಜ ರೇವಶೆಟ್ಟೆ, ಪುಂಡಲಿಕ ರಾಯಗೊಂಡೆ, ವಿಜಯಕುಮಾರ ಪಾಟೀಲ್ ಗಾದಗಿ ಗ್ರಾಮದ ಪ್ರಮುಖರು, ಹಿರಿಯರು, ಮಹಿಳೆಯರು, ವಿಶೇಷವಾಗಿ ಯುವಕರು ಪಾಲ್ಗೊಂಡಿದ್ದರು.