ಅಧಿಕಾರಕ್ಕೆ ಬಂದ 24 ತಾಸಿನಲ್ಲೇ ರೈತರ ಸಂಪೂರ್ಣ ಸಾಲ ಮನ್ನಾ: ಇಲ್ಲಿದೆ ಜೆಡಿಎಸ್ ಚುನಾವಣಾ ಪ್ರಣಾಳಿಕೆ ಹೈಲೈಟ್ಸ್

ಬೆಂಗಳೂರು, ಮೇ 7

ಜಾತ್ಯತೀತ ಜನತಾ ದಳ ತಾನು ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ತಿಳಿಸಿದೆ. ಸೋಮವಾರ ಬಿಡುಗಡೆಯಾದ ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಭರ್ಜರಿ ಯೋಜನೆಗಳ ಆಶ್ವಾಸನೆ ನೀಡಿದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. ಅದಕ್ಕೆ ಬರೋಬ್ಬರಿ 53 ಸಾವಿರ ಕೋಟಿ ರೂ ವೆಚ್ಚವಾಗಲಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರಗಳನ್ನು ಉಚಿತವಾಗಿ ಪೂರೈಸುವುದಾಗಿ, ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಸುವುದಾಗಿ ಪಕ್ಷ ಹೇಳಿಕೊಂಡಿದೆ.

ಪ್ರಣಾಳಿಕೆಯ ಮುಖ್ಯಾಂಶಗಳು:
1.ರೈತರ ಸಂಪೂರ್ಣ ಸಾಲಮನ್ನಾ
2.ಗ್ರಾಮೀಣ ಭಾಗದ  ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ವಿದ್ಯುತ್.
3.ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಉಚಿತ.
4.ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆ.
5. ಶ್ರೀ ಶಕ್ತಿ ಸ್ವಸಾಯ ಸಂಘಗಳ ಸಾಲ ಮನ್ನಾ.
6. ಗರ್ಭಿಣಿಯರಿಗೆ 6 ತಿಂಗಳಿನಿಂದ 12 ತಿಂಗಳ ತಿಂಗಳವರೆಗೂ ಪ್ರತಿ ತಿಂಗಳು 6,000 ರೂ ಧನಸಹಾಯ.
7. ವಿಕಲಚೇತನರಿಗೆ ತಿಂಗಳಿಗೆ 2000 ಸಹಾಯಧನ.
8. 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮಾಸಿಕ 5000 ರೂ.
9. ಪ್ರತಿ ತಿಂಗಳು ವಿಧಾನಸೌಧದದಲ್ಲಿ ರೈತರ ಸಭೆ.
10. ವಿಧವಾ ವೇತನ ಮಾಸಿಕ 2000 ರೂ.
11. ವಿಕಲಚೇತರನ್ನು ಮದುವೆ ಯಾದರೆ 50 ಸಾವಿರದಿಂದ 1 ಲಕ್ಷದವರೆಗೆ ಸಹಾಯಧನ
12. ಹಳ್ಳಿಗಳ ಅವಿದ್ಯಾವಂತ ಯುವಕ, ಯುವತಿಯರಿಗೆ ಸಸಿ ನಡೆವ ಕೆಲಸ ನೀಡಿ ಮಾಸಿಕ 5000 ರೂ ಗೌರವಧನ.
13. ವಯೋವೃದ್ಧರಿಗೆ ಉಚಿತ ಬಸ್ ಪಾಸ್.
14. ಬಿಪಿಎಲ್ ಕಾರ್ಡ್​ದಾರರಿಗೆ 30 ಕೆಜಿ ಅಕ್ಕಿ.
15. ರೈತರ ಬೆಳೆಗೆ ಬೆಂಬಲ ಬೆಲೆ.
16. ಸಣ್ಣ ಟ್ರಾಕ್ಟರ್ ಖರೀದಿಗೆ ಶೇ75 ರಷ್ಟು ಹಾಗೂ ಇತರೆ ಸಲಕರಣೆ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.
17. ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಮಾಸಿಕ 2000 ರೂ.
18. ಆರ್ಯವೈಶ್ಯ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ.
19. ಉದ್ಯೋಗವಂತ ಮಹಿಳೆಯರಿಗೆ ಬೆಂಗಳೂರಿನಲ್ಲಿ ಸು.100 ವಸತಿ ನಿಲಯಗಳ ಸ್ಥಾಪನೆ.
20. ಡಾ. ವಿಷ್ಣುವರ್ಧನ್ ಸಮಾಧಿ ಸ್ಥಳದ ವಿವಾದ ಬಗೆಹರಿಸಲಾಗುವುದು.
21. ಆಶಾ ಕಾರ್ಯಕರ್ತರ ಪ್ರೋತ್ಸಾಹ ಧನ 3500 ರಿಂದ 5000 ರೂಗೆ ಏರಿಕೆ.
22. ವಕೀಲರ ಸಂಘಕ್ಕೆ 100 ಕೋಟಿ ಅನುದಾನ. ಮತ್ತು ವಕೀಲರಿಗೆ 5000 ಸ್ಟೈಪೆಂಡ್.
23. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದುವರಿಕೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ