ಮೈಸೂರು, ಮೇ 7-ಸೆಕೆಯೆಂದು ಕಿಟಕಿ -ಬಾಗಿಲು ತೆರೆದು ಮಲಗಿದ್ದ ಮನೆಗಳ ಬಳಿ ಹೋಗಿ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡುತ್ತಿದ್ದ ವಿಕೃತ ಮನಸ್ಸಿನ ಪೆÇಲೀಸ್ ಕಾನ್ಸ್ಟೆಬಲ್ನನ್ನು ಸ್ಥಳೀಯರೇ ಹಿಡಿದು ಥಳಿಸಿರುವ ಘಟನೆ ನಡೆದಿದೆ.
ನಗರದ ಲಷ್ಕರ್ ಪೆÇಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ಸ್ಟೆಬಲ್ ಮೆಹಬೂಬಳ್ಳಿ ಥಳಿತಕ್ಕೊಳಗಾದವರು. ಪೆÇಲೀಸರೆಂದರೆ ಗೌರವ ನೀಡುವ ಜನರಿಂದಲೇ ಈ ಕಾನ್ಸ್ಟೆಬಲ್ ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗಿ ಪೆÇಲೀಸರ ಅತಿಥಿಯಾಗಿದ್ದಾರೆ.
ರಾತ್ರಿ ಗಸ್ತಿನ ವೇಳೆ ಈತ ಮನೆಯ ಕಿಟಕಿಗಳ ಬಳಿ ಹೋಗಿ ಚಿತ್ರೀಕರಣ ಮಾಡುತ್ತಿದ್ದ ಎಂದು ಹೇಳಲಾಗಿದೆ. ಹಲವು ಬಾರಿ ಇದೇ ರೀತಿ ಕೃತ್ಯವೆಸಗಿರುವುದು ಕಂಡು ಬಂದಿದೆ.
ಇಂದು ಬೆಳಗಿನ ಜಾವ 3 ಗಂಟೆಯ ಸುಮಾರಿನಲ್ಲಿ ಈತ ಮನೆಯಿಂದ ಬಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಸಾರ್ವಜನಿಕರು ಕಳ್ಳನೆಂದು ಭಾವಿಸಿ ಹಿಡಿದು ಥಳಿಸಿದಾಗ ಈತ ಪೆÇಲೀಸ್ ಕಾನ್ಸ್ಟೆಬಲ್ ಎಂಬುದು ಗೊತ್ತಾಗಿದೆ. ತದನಂತರ ಪೆÇಲೀಸ್ ವಶಕ್ಕೆ ಈತನನ್ನು ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.