ನವದೆಹಲಿ, ಮೇ 7- ಹುಟ್ಟುಹಬ್ಬದ ಸಂಭ್ರಮದ ವೇಳೆ ಡಿಜೆಯ ಪುಂಡಾಟಿಕೆಯಿಂದ ಒಬ್ಬನ ಕೊಲೆಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಪಶ್ಚಿಮ ದೆಹಲಿಯ ಪಂಜಾಬಿಭಾಗ್ನ ರಫ್ತಾರ್ ರೆಸ್ಟೋರೆಂಟ್ನಲ್ಲಿ ಇಸ್ಮಿತ್ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಪಾರ್ಟಿಯನ್ನು ಹಮ್ಮಿಕೊಂಡಿದ್ದರು.
ಪಾರ್ಟಿಯ ವೇಳೆ ರೆಸ್ಟೋರೆಂಟ್ನಲ್ಲಿದ್ದ ಡಿಜೆಯನ್ನು ತಮ್ಮ ಇಷ್ಟವಾದ ಗೀತೆಯನ್ನು ಹಾಡುವಂತೆ ಕೇಳಿಕೊಂಡಿದ್ದಾರೆ, ಆದರೆ ಆತ ಅವರ ಇಚ್ಛೆಯಂತೆ ಗೀತೆ ಹಾಡಲು ನಿರಾಕರಿಸಿದ್ದಾನೆ.
ಈ ವೇಳೆ ಡಿಜೆ ದೀಪಕ್ ಬಿಸ್ಟ್ ಹಾಗೂ ಇಸ್ಮಿತ್ರ ಸ್ನೇಹಿತರ ನಡುವೆ ಮಾರಾಮಾರಿ ಉಂಟಾಗಿದೆ. ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ಹೋಗಿ ಇಸ್ಮಿತ್ನ ಸ್ನೇಹಿತರು ಅಲ್ಲಿದ್ದ ಪೀಠೋಪಕರಣಗಳು ಹಾಗೂ ಮದ್ಯದ ಬಾಟಲ್ಗಳ ನಾಶಕ್ಕೆ ಮುಂದಾದಾಗ ರೆಸ್ಟೋರೆಂಟ್ನ ಸಿಬ್ಬಂದಿಗಳು ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ.
ಒಂದು ಹಂತದಲ್ಲಿ ಡಿಜೆ ದೀಪಕ್ ಬಿಸ್ಟ್ ಚಾಕುವಿನಿಂದ ಇಸ್ಮಿತ್ನ ಸ್ನೇಹಿತ ವಿಜಯ್ದೀಪ್ಗೆ ಹಲ್ಲೆ ನಡೆಸಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬಳಿಗೆ ಗಂಭೀರ ಗಾಯಗಳಾಗಿದ್ದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೆÇಲೀಸರು ಡಿಜೆ ದೀಪಕ್ ಬಿಸ್ಟ್ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.