ರಾಜ್ಯ ಕಾಂಗ್ರೆಸ್ ನಲ್ಲಿ ಶುರುವಾಯ್ತು ಕುರುಬ v/s ದಲಿತ ಎಂಬ ಹೊಸ ಕೂಗು

ಮೈಸೂರು: ಮೇ-7:ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆವರಿಳಿಸಿದ ದಲಿತ ಮುಖಂಡ ಎಲ್ಲಾ ಕ್ಷೇತ್ರದಲ್ಲಿ ದಲಿತರು ಕಾಂಗ್ರೆಸ್ ಗೆ ಓಟ್ ಹಾಕ್ತೀವಿ ಆದರೆ ಡಾ. ಜಿ. ಪರಮೇಶ್ವರ್ ಕ್ಷೇತ್ರದಲ್ಲಿ ಸಿ ಎಂ ಸಿದ್ದರಾಮಯ್ಯ ಸಮುದಾಯದವರು ಯಾಕೆ ಕಾಂಗ್ರೆಸ್ ಗೆ ಓಟ್ ಹಾಕೋದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನ ಕೆ. ಆರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಕೆ. ಸೋಮಶೇಖರ್ ಪರ ಮತ ಕೇಳಲು ಬಂದ ಮಲ್ಲಿಕಾರ್ಜುನ ಖರ್ಗೆಗೆ ಅಶೋಕಪುರಂ ಯುವಕನು ಪ್ರಶ್ನೆ ಮಾಡಿದ್ದು, ಶಾಸಕ ಎಂ ಕೆ ಸೋಮಶೇಖರ್ ಪರ ಪ್ರಚಾರಕ್ಕೆ ಬಂದ ಖರ್ಗೆ ತೀವ್ರ ಇಕ್ಕಟ್ಟಿಗೆ, ಮುಜುಗರಕ್ಕೆ ಸಿಲುಕಿದರು. ಈ ನಡುವೆ ಮಲ್ಲಿಕಾರ್ಜುನ ಖರ್ಗೆ ರೋಡ್ ಶೋ ಗೆ ಅಡ್ಡಿಪಡಿಸಿದ ಅಶೋಕಪುರಂ ನಿವಾಸಿಗಳು ಪ್ರಚಾರ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ಥಳೀಯ ದಲಿತ ಮುಖಂಡರು ದಲಿತ ಮುಖ್ಯಮಂತ್ರಿಗಾಗಿ ಆಗ್ರಹಿಸಿದ್ದಾರೆ.

ಸಾರ್ವಜನಿಕವಾಗಿಯೇ ಖರ್ಗೆಗೆ ಪ್ರಶ್ನಿಸಿದ ಯುವಕ ಭರತ್ ರಾಮಸ್ವಾಮಿ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದೆ ತಡಬಡಾಯಿಸಿದ ಖರ್ಗೆ ಎಲ್ಲಾ ವಿಚಾರ ಗೊತ್ತಿದೆ ದಾರಿ ಬಿಡಿ ಎಂದು ಕೈಸನ್ನೆ ಮಾಡಿ ಮುಂದೆ ಸಾಗಿದರು.

ಖರ್ಗೆಶ್ರೀನಿವಾಸ್ ಪ್ರಸಾದ್ ರನ್ನು ಕಡೆಗಣಿಸಿದ ಬಗ್ಗೆಯೂ ಅಸಮಧಾನ ವ್ಯಕ್ತವಾಗಿದೆ. ಇನ್ನು ಕೆಲಕಾಲ ರೋಡ್ ಶೋ ಗೆ ಅಡ್ಡಿಪಡಿಸಿ, ಖರ್ಗೆಯವರನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ನಂತರ ರೋಡ್ ಶೋ ಮುಂದೆ ಸಾಗಲು ದಲಿತ ಮುಖಂಡರು ದಾರಿಬಿಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ