ಧಾರವಾಡ : ಮೇ-7: ಮತದಾರರಿಗೆ ಹಂಚಲು ಅಂಬ್ಯುಲೆನ್ಸ್ ನಲ್ಲಿ ಸಾಗಿಸುತ್ತಿದ್ದ ಸೀರೆಗಳನ್ನು ವಶಪಡಿಸಿಕೊಂಡ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.
ಧಾರವಾಡ ತಾಲೂಕಿನ ತೇಗೂರು ಕ್ರಾಸ್ ಬಳಿ ಈ ಘಟನೆ ಜರುಗಿದ್ದು, ೯೦ ಸಾವಿರ ರೂ. ಮೌಲ್ಯದ ೧೮೦೦ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿಯಿಂದ ಹಾವೇರಿ ಕಡೆಗೆ ಹೋಗುತ್ತಿದ್ದ ಅಂಬ್ಯುಲೆನ್ಸ್ ನಲ್ಲಿ ಈ ಸೀರೆಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಅಂಬ್ಯುಲೆನ್ಸ್ ನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರನ್ನು ಜೈಪಾಲ್ ಸಿಂಗ್, ಸೇರಿ ವಾಲ್ಮೀಕ ಪಾಟೀಲ ಚಾಲಕ, ರಾಜಕುಮಾರ್ ಪ್ರಮೋದ ಎಂದು ಗುರುತಿಸಲಾಗಿದೆ.
ಹೊಸ ಅಂಬುಲೆನ್ಸ್ ವಾಹನ ಇದಾಗಿದ್ದು, ಯಾವುದೇ ಬಿಲ್ ಇಲ್ಲದೆ, ಮಾರಾಟ ಮಾಡಲು ಕಂಪನಿಯಿಂದ ಬರುತ್ತಿದ್ದ ವಾಹನದಲ್ಲಿ ತೆಗೆದುಕೊಂಡು ಬರುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ಗರಗ ಪೊಲೀಸ್ ಠಾಣೆ ಪಿಎಸ್ ಐ ಸಂಗಮೇಶ ಪಾಲಬಾವಿ ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.
ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.