ಪ್ರಚಾರದಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಭರವಸೆ
ಎಸ್ಇಝಡ್ ಘೋಷಣೆಗೆ ಒತ್ತಡ
ಬೀದರ್, ಮೇ. 6- ನಗರದ ಹೊರವಲಯದ ಕೊಳಾರ ಕೈಗಾರಿಕಾ ಪ್ರದೇಶವನ್ನು ವಿಶೇಷ ಆರ್ಥಿಕ ವಲಯ (ಎಸ್ಇಝಡ್)ಎಂದು ಘೋಷಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವೆ ಎಂದು ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಭರವಸೆ ನೀಡಿದರು.
ನಗರದ ಲೇಬರ್ ಕಾಲೋನಿಯಲ್ಲಿ ಸಂಚಾರ ನಡೆಸಿ ಮತಯಾಚನೆ ಮಾಡಿದ ಅವರು, ಎಲ್ಲರು ಆಶೀರ್ವದಿಸಿದರೆ ಕೇಂದ್ರದಿಂದ ಬೃಹತ್ ಕೈಗಾರಿಕೆ ಸ್ಥಾಪಿಸಲು ಯತ್ನಿಸುವೆ ಎಂದು ಭರವಸೆ ನೀಡಿದರು.
ದೊಡ್ಡ ದೊಡ್ಡ ಉದ್ಯಮ ತರುವುದು ಸೇರಿದಂತೆ ದುಡಿಯುವ ಕೈಗಳಿಗೆ ಕೆಲಸ ನೀಡುವುದು ನನ್ನ ಧ್ಯೇಯವಾಗಿದೆ. ಇದಕ್ಕಾಗಿ ನನ್ನದೇ ಆದ ವಿಜನ್ ಹೊಂದಿರುವೆ. ಎಸ್ಇಝಡ್ ಮೂಲಕ ಉದ್ಯಮ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ಅದರ ಸದ್ಬಳಕೆ ಮಾಡಿಕೊಳ್ಳುವೆ. ಇಲ್ಲಿ ಬೃಹತ್ ಕೈಗಾರಿಕೆ ಬಂದರೆ 20 ರಿಂದ 40 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದ್ದು, ಸ್ಥಳೀಯರು ಬೇರೆಡೆ ಗುಳೆ ಹೋಗುವುದು ತಪ್ಪಲಿದೆ ಎಂದರು.
2009ರ ಉಪ ಚುನಾವಣೆಯಲ್ಲಿ ಸೋತರೂ ನಾನು ನಿರಂತರ ಜನಸೇವೆಯಲ್ಲಿz್ದÉೀನೆ. ಇಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಿ 110 ಪ್ರತಿಷ್ಠಿತ ಕಂಪೆನಿಗಳನ್ನು ಕರೆಸಿ 2400 ಮಂದಿಗೆ ಕೆಲಸ ಕೊಡಲಾಗಿದೆ.
ತಂದೆ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಎನ್ನೆಸ್ಸೆಸ್ಕೆ ನಿರ್ಮಿಸಿ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ಜತೆಗೆ ಸಹಸ್ರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಶಾರದಾ ರುಡ್ಸೆಟ್ನಿಂದ ಕೌಶಲ ತರಬೇತಿ ಕೊಟ್ಟು ಸಹಸ್ರಾರು ಜನರಿಗೆ ಸ್ವಂತ ಉದ್ಯೋಗ ಆರಂಭಿಸಲು ನೆರವಾಗಿದ್ದಾರೆ ಎಂದರು.
ಹಲವು ಮುಖಂಡರು, ಪ್ರಮುಖರು ಇದ್ದರು.