ಬಿಜೆಪಿ ಅಭ್ಯರ್ಥಿ ಮೇಲೆ ಹೂವಿನ ಸುರಿಮಳೆ
ಸುಭಾಷ ಕಲ್ಲೂರ್ಗೆ ಅದ್ಧೂರಿ ಸ್ವಾಗತ
ಬೀದರ, ಮೇ. 5- ಎಲ್ಲೆಡೆ ಮಿಂಚಿನ ಸಂಚಾರ ಮಾಡುತ್ತಿರುವ ಹುಮನಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ಅವರಿಗೆ ಹೂವಿನ ಸುರಿಮಳೆ ಮಾಡಲಾಗುತ್ತಿದೆ. ಕ್ಷೇತ್ರದ ಹಳ್ಳಿಖೇಡ್ (ಬಿ) ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ ಕಲ್ಲೂರ್ ಮೇಲೆ ಅಲ್ಲಿನ ಅಭಿಮಾನಿಗಳು ಹೂವಿನ ಸುರಿಮಳೆಗೈದಿದ್ದು ವಿಶೇಷ.
ಈ ವೇಳೆ ಮಾತನಾಡಿದ ಸುಭಾಷ ಕಲ್ಲೂರ್, ಈ ರೀತಿಯ ಅದ್ಧೂರಿ ಸ್ವಾಗತದಿಂದ ನನಗೆ ಬಹಳ ಖುಷಿಯಾಗಿದೆ. ಮೇ 12ರಂದು ಎಲ್ಲರು ತಪ್ಪದೇ ಮತದಾನ ಮಾಡುವ ಮೂಲಕ ಬಿಜೆಪಿಗೆ ಭರ್ಜರಿ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಂಸದ ಭಗವಂತ ಖೂಬಾ ಮಾತನಾಡಿ, ಜಿಲ್ಲೆಯ ಎಲ್ಲ ಆರು ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಹುಮನಾಬಾದ್ನಲ್ಲಿ ಉತ್ತಮ ವಾತಾವರಣ ಇದೆ. ಎಲ್ಲೆಡೆ ಆಡಳಿತ ವಿರೋಧಿ ಅಲೆ ಇದ್ದು, ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ಗುಂಡುರೆಡ್ಡಿ, ಪ್ರಮುಖರಾದ ಶಿವಾನಂದ ಮಂಠಾಳಕರ್, ಸೋಮನಾಥ ಪಾಟೀಲ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.