
ಕನ್ನಡದ ಹೆಸರಾಂತ ನಿರ್ದೇಶಕ ಪಿ ಎನ್ ಸತ್ಯ ನಿನ್ನೆ ಸಂಜೆ 7;30ಕ್ಕೆ ವಿಧಿವಶರಾಗಿದ್ದಾರೆ. ಸುಮಾರು ತಿಂಗಳುಗಳಿಂದ ಅನಾರೀಗ್ಯದಿಂದ ಬಳಲುತ್ತಿದ್ದ ಪಿ ಎನ್ ಸತ್ಯ ಎರಡು ವಾರಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೆಳಗ್ಗೆ ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಮನೆಗೆಕರೆದುಕೊಂಡು ಬರಲಾಗಿತ್ತು, ಸಂಜೆ ಲೋ ಬಿಪಿ ಆದ ಕಾರಣ ಕೊನೆ ಉಸಿರೆಳೆದಿದ್ದಾರೆ. ಬಸವೇಶ್ವರನಗರದ ಸತ್ಯ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದೆ.
ಶಶಿಕುಮಾರ್ ನಟನೆಯ ಸುಂದರ ಪುರುಷ ಅವರ ಮೊದಲ ಸಿನಿಮಾ ಮತ್ತು ಮರಿಟೈಗರ್ ಕೊನೆ ಚಿತ್ರ.