
ಅಗರ್ತಲಾ, ಮೇ 6-ಗಡಿ ಭದ್ರತಾಪಡೆಯ (ಬಿಎಸ್‍ಎಫ್) ಯೋಧನೊಬ್ಬ ಇಂದು ಮುಂಜಾನೆ ಮನಬಂದಂತೆ ಗುಂಡು ಹಾರಿಸಿ ತನ್ನ ಮೂವರು ಸಹೋದ್ಯೋಗಿಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುನಕೋಟಿ ಜಿಲ್ಲೆಯ ಮಗರೂಲಿ ಗಡಿ ಪೋಸ್ಟ್ನಲ್ಲಿ ನಡೆದಿದೆ.
ಮುಂಜಾನೆ 1 ಗಂಟೆ ಸಂದರ್ಭದಲ್ಲಿ ಯೋಧನೊಬ್ಬ ತನ್ನ ಜೊತೆಯಲ್ಲಿಯೇ ಕಾವಲು ಕಾಯುತ್ತಿದ್ದ ಹೆಡ್‍ಕಾನ್‍ಸ್ಟೆಬಲ್ ಸೇರಿದಂತೆ ಮತ್ತಿಬ್ಬರ ಮೇಲೆ ಗುಂಡಿನ ಸುರಿಮಳೆಗರೆದು ನಂತರ ತಾನೂ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಬಿಎಸ್‍ಎಫ್‍ನ ವಿಶೇಷ ಘಟಕದ ಅಧಿಕಾರಿ ಶಂಕರ್ ದಿಬನಾಥ್‍ತಿಳಿಸಿದ್ದಾರೆ.
ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.