ಸಚಿವ ಎಂ.ಬಿ.ಪಾಟೀಲ್ ಫೌಂಡೇಷನ್‍ನಿಂದ ನೀಡಲಾಗಿದ್ದ ಗೃಹೋಪಯೋಗಿ ವಸ್ತುಗಳನ್ನು ಗ್ರಾಮಸ್ಥರೇ ರಸ್ತೆಗೆ ಎಸೆದಿರುವ ಘಟನೆ

ವಿಜಯಪುರ, ಮೇ 5-ಸಚಿವ ಎಂ.ಬಿ.ಪಾಟೀಲ್ ಫೌಂಡೇಷನ್‍ನಿಂದ ನೀಡಲಾಗಿದ್ದ ಕುಕ್ಕರ್ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ಗ್ರಾಮಸ್ಥರೇ ರಸ್ತೆಗೆ ಎಸೆದಿರುವ ಘಟನೆ ತಾಲೂಕಿನ ಅತಾಲಟ್ಟಿ ಗ್ರಾಮದಲ್ಲಿ ನಡೆದಿದೆ.

ಕಳೆದ ಕೆಲವು ತಿಂಗಳ ಹಿಂದೆ ಕುಕ್ಕರ್, ಪ್ಲೇಟ್, ಬಿಂದಿಗೆ, ಸೀರೆಯಂತಹ ಹಲವು ವಸ್ತುಗಳನ್ನು ಫೌಂಡೇಷನ್‍ನಿಂದ ನೀಡಲಾಗಿತ್ತು. ಆದರೆ ಈ ಬಾರಿ ಮತ ಹಾಕಲೇಬೇಕು ಎಂದು ಒತ್ತಾಯ ಹೇರುತ್ತಿರುವ ನಡುವೆ ಅವಾಚ್ಯ ಶಬ್ಧಗಳಿಂದ ಕಾಂಗ್ರೆಸ್ ಕಾರ್ಯಕರ್ತರು ನಿಂದಿಸಿರುವುದರಿಂದ ನೊಂದ ಗ್ರಾಮಸ್ಥರು ವಸ್ತುಗಳನ್ನೆಲ್ಲ ರಸ್ತೆಗೆ ಎಸೆದಿದ್ದಾರೆ.

ಬೇಕೆಂದರೆ ಸಚಿವರಿಗೆ ನಾವೇ ಎಲ್ಲಾ ಸಾಮಗ್ರಿಗಳನ್ನು ಕೊಡಿಸುತ್ತೇವೆ ಎಂದು ಹೇಳುತ್ತಿರುವ ಗ್ರಾಮಸ್ಥರು ಫೌಂಡೇಷನ್‍ನಿಂದ ನೀಡಿದ್ದ ವಸ್ತುಗಳನ್ನು ರಸ್ತೆಗೆ ಹಾಕಿರುವುದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಬಗ್ಗೆ ಸ್ವತಃ ಗ್ರಾಮಸ್ಥರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾಮಗ್ರಿಗಳನ್ನು ಇಟ್ಟುಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಒಟ್ಟಾರೆ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಈಗಾಗಲೇ ಎಲ್ಲೆಡೆ ಚುನಾವಣೆಯ ಅಬ್ಬರ ಆರಂಭವಾಗಿರುವ ನಡುವೆ ಗ್ರಾಮಸ್ಥರ ಈ ನಡೆ ಅಚ್ಚರಿ ಮೂಡಿಸಿದ್ದರೂ ಸ್ವತಃ ಗ್ರಾಮದಲ್ಲಿ ಒಂದು ರೀತಿಯ ಆತಂಕ ನಿರ್ಮಾಣ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ