ಡಾಲ್ಟನ್‍ಗಂಜ್, ಮೇ 5-ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕೇಂದ್ರದ ಕಾನೂನು ಎಚ್ಚರಿಕೆ ನಡುವೆಯೂ ದೇಶದ ವಿವಿಧೆಡೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಿಂಸಾಚಾರ ಮುಂದುವರಿದಿದೆ. ಎಂಟನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಜೀವಂತವಾಗಿ ಸುಟ್ಟುಹಾಕಿರುವ ಭೀಭತ್ಸ ಘಟನೆ ಜಾರ್ಖಂಡ್ ಜಿಲ್ಲೆಯ ಭಾತ್ರಾ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.
ಘಟನೆ ವಿವರ : ಬಾಲಕಿ ಸಂಬಂಧಿಕರ ವಿವಾಹದಲ್ಲಿ ಪಾಲ್ಗೊಳ್ಳಲು ಹೋಗಿದ್ದ ವೇಳೆ, ಗುರುವಾರ ರಾತ್ರಿ ಆರೋಪಿ ಬಾಲಕಿಯನ್ನು ಅಪಹರಿಸಿ ಮೇಲೆ ಅತ್ಯಾಚಾರ ಎಸಗಿದ್ದ.
ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಮ ಪಂಚಾಯಿತಿ ಮುಖ್ಯಸ್ಥರು ಕಾಮುಕನಿಗೆ 50,000 ರೂ. ದಂಡ ವಿಧಿಸಿದ್ದರು. ಈ ತೀರ್ಪಿನಿಂದ ಆಕ್ರೋಶಗೊಂಡ ಆರೋಪಿಯು ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಥಳಿಸಿ, ಬಾಲಕಿಯನ್ನು ಸಜೀವ ದಹನ ಮಾಡಿದ ಎಂದು ಪೆÇಲೀಸರು ತಿಳಿಸಿದ್ದಾರೆ.
ಆರೋಪಿಯು ಘೋರ ಕೃತ್ಯ ಎಸಗಿರುವುದನ್ನು ಪ್ರತ್ಯಕ್ಷದರ್ಶಿಗಳೂ ಕೂಡ ದೃಢಪಡಿಸಿದ್ದಾರೆ. ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗುತ್ತಿದ್ದಂತೆ, ಆರೋಪಿ ಮತ್ತು ಆತನ ಸಹಚರರು ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ನಂತರ ಸಂತ್ರಸ್ತೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು ಎಂದು ಅವರು ಘಟನೆಯ ಭೀಕರತೆಯನ್ನು ವಿವರಿಸಿದ್ಧಾರೆ.
ಆರೋಪಿ ಮತ್ತು ಆತನ ಸಹಚರರು ನಾಪತ್ತೆಯಾಗಿದ್ದ ಅವರ ಬಂಧನಕ್ಕೆ ಬಲೆ ಬೀಸಿರುವುದಾಗಿ ಪೆÇಲೀಸ್ ಉಪ ಅಧೀಕ್ಷಕ ಪೀತಾಂಬರ್ ಸಿಂಗ್ ಖೇರ್‍ವಾರ್ ತಿಳಿಸಿದ್ದಾರೆ.