ನಾಳೆಯಿಂದ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ಬೆಂಗಳೂರು, ಮೇ 4- ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ನಾಳೆಯಿಂದ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ನಿನ್ನೆ ರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾದ ವರದಿ ಹಲವು ಕಡೆ ಆಗಿದೆ.

ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಕೊಡುಗು, ಹಾಸನ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳ ಹಲವು ಭಾಗಗಳಲ್ಲಿ ಮಳೆಯಾದ ವರದಿಯಾಗಿದೆ.

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗಿದೆ. ಹವಾ ಮುನ್ಸೂಚನೆ ಪ್ರಕಾರ ನಾಳೆಯಿಂದ ಇನ್ನೂ ಒಂದು ವಾರ ಕಾಲ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.

ಮಳೆಯ ಮಾಹಿತಿ ವಿವರ(ಮಿಲಿಮೀಟರ್‍ನಲ್ಲಿ):
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ
ಸಿಂಗಸಂದ್ರ-31.5
ಬೊಮ್ಮನಹಳ್ಳಿ-28.5
ಕೋಣನಕುಂಟೆ-23
ಎಚ್.ಎಸ್.ಆರ್.ಲೇಔಟ್-28
ಬೇಗೂರು-45
ಯಲಹಂಕ-24.5
ನಾಗರಬಾವಿ-26.5
ಲಕ್ಕಸಂದ್ರ-20.5
ಹಂಪಿನಗರ-21.5
ಮಾರತ್‍ಹಳ್ಳಿ-36.5
ಸಂಪಂಗಿರಾಮನಗರ-21.5
ಹೊಯ್ಸಳನಗರ-32
ರಾಜರಾಜೇಶ್ವರಿನಗರ-26.5
ಹೂಡಿ-27.5
ಬಸವನಪುರ-26.5
ಬೆಳ್ಳಂದೂರು-29.5
ಹೆಮ್ಮಿಗೆಪುರ-72 ಮಿಲಿಮೀಟರ್‍ನಷ್ಟು ಭಾರೀ ಮಳೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ