
ಬೆಂಗಳೂರು ಮೇ 4: ಚಿಕಿತ್ಸೆ ಫಲಕಾರಿಯಾಗದೇ ಜಯದೇವ ಆಸ್ಪತ್ರೆಯಲ್ಲಿ ಸಾವನಪ್ಪಿದ್ದ ಶಾಸಕ ವಿಜಯ್ ಕುಮಾರ್ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸ್ಪಷ್ಟನೆ
ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಜಯನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದು ನಿನ್ನೆ ಚುನಾವಣೆ ಪ್ರಚಾರ ವೇಳೆ ಕುಸಿದು ಬಿದಿದ್ದ ವಿಜಯ್ ಕುಮಾರರನ್ನು ಕೂಡಲೇ ಜಯದೇವ ಆಸ್ಪತ್ರೆಗೆ ದಾಖಲಿಸಿದ್ರು. ಆಸ್ಪತ್ರೆ ಕರೆತಂದಾಗಲೇ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ವೈದ್ಯರು ವಿಜಯ್ ಕುಮಾರ್ ಬದುಕಿಸಲು ಪ್ರಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆಗೆ ವಿಜಯ್ ಕುಮಾರ್ ವಿಧಿ ವಶ.
ಶಾಸಕ ವಿಜಯ್ ಕುಮಾರ್ ಪಾರ್ಥಿವ ಶರೀರ ಜಯನಗರದ ನಿವಾಸಕ್ಕೆ ರವಾನೆ. ಜಯನಗರದ 4 th ಟಿ ಬ್ಲಾಕ್ ನಲ್ಲಿರೋ ಮೃತ ವಿಜಯ್ ಕುಮಾರ್ ನಿವಾಸ ಮನೆ ಮುಂದೆ ನೆರದಿರೋ ಅಪಾರ ಮೃತ ವಿಜಯ್ ಕುಮಾರ್ ಬೆಂಬಲಿಗರು.