ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹಿಂಸಾಚಾರ ಮತ್ತು ಸಂಘರ್ಷದಿಂದ ಯೆಮನ್‍ನಲ್ಲಿ ನರಕ

ಏಡನ್, ಮೇ 4-ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹಿಂಸಾಚಾರ ಮತ್ತು ಸಂಘರ್ಷದಿಂದ ಯೆಮನ್‍ನಲ್ಲಿ ನರಕ ಸದೃಶ ಪರಿಸ್ಥಿತಿ ಮುಂದುವರಿದಿದೆ. ಸುಮಾರು 29 ಲಕ್ಷ ಮಹಿಳೆಯರು ಮತ್ತು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಸಾವಿನ ದವಡೆಗೆ ಸಿಲುಕಿದ್ದಾರೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವವರಲ್ಲಿ ನಾಲ್ಕು ಲಕ್ಷ ಮಕ್ಕಳು ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ತೀವ್ರ ಕುಪೆÇೀಷಣೆಯಿಂದ ನರಳುತ್ತಿರುವವರ ಮಕ್ಕಳಲ್ಲಿ ಶೇ.30ರಷ್ಟು ಸಾವಿಗೀಡಾಗುವ ಆತಂಕವಿದೆ. ಎಂದು ಎಪಿ(ಅಸೋಸಿಯೇಟೆಡ್ ಪ್ರೆಸ್) ಸುದ್ದಿ ಸಂಸ್ಥೆ ವರದಿ ಮಾಡಿದೆ.

2.9 ಕೋಟಿ ಜನಸಂಖ್ಯೆ ಇರುವ ಯೆಮನ್‍ನಲ್ಲಿ 84 ಲಕ್ಷ ಮಂದಿ(ಮೂರನೇ ಒಂದು ಭಾಗದಷ್ಟು) ಆಹಾರಕ್ಕಾಗಿ ನೆರವಿನ ಕಾರ್ಯಕ್ರಮವನ್ನು ಅವಲಂಬಿಸಿದ್ದಾರೆ. ಈ ನೆರವು ಲಭಿಸದಿದ್ದರೆ ಅವರು ಹಸಿವಿನಿಂದ ನರಳಬೇಕಾಗುತ್ತದೆ.

ಯೆಮನ್‍ನ ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಕೃಶರಾಗಿ ವಿವಿಧ ಅನಾರೋಗ್ಯಗಳಿಂದ ಬಳಲುತ್ತಿದ್ದಾರೆ. ಆಹಾರ ಕೊರತೆ ತೀವ್ರವಾಗಿದ್ದು, ಮಾತೆಯರು ತಮ್ಮ ಪಾಲಿನ ಆಹಾರವನ್ನು ಮಕ್ಕಳಿಗೆ ನೀಡಿ ಅವರನ್ನು ಬದುಕಿಸಲು ಯತ್ನಿಸುತ್ತಿದ್ದಾರೆ.

ಒಂದೆಡೆ ಕ್ಷಾಮ ಮತ್ತೊಂದೆಡೆ ಸಂಘರ್ಷದಿಂದಾಗಿ ಯೆಮನ್ ನಾಗರಿಕರ ಬದುಕು ಮೂರಾಬಟ್ಟೆಯಾಗಿದೆ.

ಆಂತರಿಕ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಕಳೆದ ವರ್ಷ ಹಸಿವು ಮತ್ತು ರೋಗಗಳಿಂದ 50,000ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ