ಚುನಾವಣಾ ಬಂದೋಬಸ್ತ್‍ಗಾಗಿ ಬೆಂಗಳೂರು ನಗರಕ್ಕೆ 37 ಕಂಪೆನಿ ಕೇಂದ್ರ ಪಡೆಗಳ ಆಗಮನ

 

ಬೆಂಗಳೂರು, ಮೇ 4- ಚುನಾವಣಾ ಬಂದೋಬಸ್ತ್‍ಗಾಗಿ ಇದುವರೆಗೂ ಬೆಂಗಳೂರು ನಗರಕ್ಕೆ 37 ಕಂಪೆನಿ ಕೇಂದ್ರ ಪಡೆಗಳು ಬಂದಿವೆ.

ಇನ್ನೂ 4 ಕಂಪೆನಿಗಳು ನಗರಕ್ಕೆ ಇಂದು ಸಂಜೆ ಅಥವಾ ನಾಳೆ ಬರಲಿವೆ. ಈಗಾಗಲೇ ಬಂದಿರುವ 37 ಕಂಪೆನಿ ಕೇಂದ್ರ ಪಡೆಗಳು ನಗರದ 8 ವಿಭಾಗಗಳಿಗೂ ನಿಯೋಜಿಸಲಾಗಿದೆ.

ಇದುವರೆಗೂ ಡಿಎಸ್‍ಎಫ್, ಸಿಐಎಸ್‍ಎಫ್, ಆರ್‍ಎಎಫ್, ಎಸ್‍ಎಸ್‍ಬಿ ಮುಂತಾದ ಕೇಂದ್ರ ಪಡೆಗಳು ಆಗಮಿಸಿವೆ. ಚುನಾವಣಾ ಬಂದೋಬಸ್ತ್‍ಗಾಗಿ ಸ್ಥಳೀಯ ಪೆÇಲೀಸರ ಜತೆಗೆ ಸಿಎಆರ್ ತುಕಡಿಗಳು ಹಾಗೂ ಕೇಂದ್ರ ಪಡೆಗಳನ್ನು ಸಹ ನಿಯೋಜಿಸಲಾಗಿದೆ.
ಬೆಂಗಳೂರು ನಗರದಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಬೆಂಗಳೂರು ನಗರ ಪೆÇಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ