ರಾಯಚೂರು:ಮೇ-4: ಆಧುನಿಕ ಬದುಕಿನಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾಗಿದೆ.ವಿದ್ಯ ಕಲಿಕೆಯಲ್ಲಿ ಭಾರತೀಯ ಪರಂಪರೆ ಆಚಾರ ವಿಚಾರ ಕಡಿಮೆಯಾಗುತ್ತಿರುವದು ತುಂಬಾ ಅಪಾಯಕಾರಿ ಇಂತಹ ಸಂದರ್ಭದಲ್ಲಿ ಶ್ರೀ ಮಠದ ಕಾರ್ಯ ಶ್ಲಾಘನೀಯ ಎಂದು ಶ್ರೀ ಚನ್ನಬಸವ ಶಿವಾಚಾರ್ಯರು ತಿಳಿಸಿದರು.
ಮಸ್ಕಿ ಶ್ರೀ ಬಾಳೆಹೊನ್ನೂ ರು ಶಾಖಾ ಮಠದಲ್ಲಿ ನಡಿಯುತ್ತಿರುವ ಬೇಸಿಗೆ ವೇದಾಧ್ಯಯನ ಶಿಬರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಆಶೀರ್ವಚನ ನೀಡಿತ್ತಾ ಮಾತನಾಡಿದ ಅವರು, ಆಧುನಿಕ ಬದುಕಿನಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾಗಿದೆ.ವಿದ್ಯ ಕಲಿಕೆಯಲ್ಲಿ ಭಾರತೀಯ ಪರಂಪರೆ ಆಚಾರ ವಿಚಾರ ಕಡಿಮೆಯಾಗುತ್ತಿರುವದು ತುಂಬಾ ಅಪಾಯಕಾರಿ ಇಂತಹ ಸಂದರ್ಭದಲ್ಲಿ ಶ್ರೀ ಮಠದಲ್ಲಿ ಹಮ್ಮಿಕೊಂದಿರುವ ಬೇಸಿಗೆ ಶಿಬಿರ ಕಾರ್ಯ ಶ್ಲಾಘನೀಯವಾದದು ಎಂದರು.
ಸುಮಾರು 7-8 ವರ್ಷದಿಂದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಭವಿಷ್ಯವನ್ನು ಕಂಡಿದ್ದಾರೆ…ಯೋಗ.ಮಂತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ವ್ಯಕ್ತಿತ್ವ ವಿಕಸನ ಪಾಠದ ಮುಖಾಂತರ ಹೇಳಿಕೊಡುವುದರಿಂದ ಮಕ್ಕಳು ಒಳ್ಳೆಯ ನಡೆನುಡಿಗಳನ್ನು ಕಲಿಯಬಹುದು ಎಂದುರು.
ಶ್ರೀ ಮಠದ ಶ್ರೀಗಳಾದ ಶ್ರೀ ಸೋಮನಾಥ ಶಿವಾಚಾರ್ಯರು ಮತ್ತು ಕಂಭಾವಿಯ ಶ್ರೀ ಚನ್ನಬಸವ ಶಿವಾಚಾರ್ಯರು ಮತ್ತು ಯೋಗಗುರುಗಳು ಶ್ರೀ ಪತ್ರಯ್ಯಸ್ವಾಮಿ ಹೀರೆಮಠ ಹುಲ್ಲೂರು ಬೆಂಗಳೂರು. ಪ್ರಾಚಾರ್ಯರಾದ ಪಂಪಯ್ಯಶಾಸ್ತ್ರಿಗಳ ಗೋನಾವಾರ ಮತ್ತು ಅನೇಕ ಭಕ್ತರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಬೇಸಿಗೆ ಶಿಬಿರವು..ಮೇ 25 ರ ವರಗೆ ನಡಿಯಲ್ಲಿದೆ.,.