ಕಾಂಗ್ರೆಸ್ ಅಬ್ಬರ…

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ರಂಗು ಮುಂದುವರೆದಿದೆ. ಖ್ಯಾತ ಬಾಲಿವುಡ್ ನಟ ರಾಜ್ ಬಬ್ಬರ್ ರಿಂದ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮತಯಾಚನೆ ಮಾಡಿದ ರಾಜ್ ಬಬ್ಬರ್, ಚಾಮುಂಡೇಶ್ವರಿ ಕ್ಷೇತ್ರದ ಭಾರತ್ ನಗರ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು.

ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಅಲೆ ಹಿನ್ನಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಗೆ ಒಕ್ಕಲಿಗರ ಮತ ನೀಡದಿರಲು ತೀರ್ಮಾನ ಮಾಡಲಾಗಿದೆ.ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಅವಕಾಶವಿದ್ದು, ಈ ಬಗ್ಗೆ ಒಕ್ಕಲಿಗ ಯುವವೇದಿಕೆಯಿಂದ ಭಿತ್ತಿ ಪತ್ರಗಳ ವಿತರಣೆ ನಡೆಯುತ್ತಿದೆ. ಕ್ಷೇತ್ರದಲ್ಲಿ ‌ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಕ್ಷೇತ್ರವನ್ನ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡಿದ್ದು, ಕುಮಾರಸ್ವಾಮಿ ಎರಡು‌ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರ್. ಇನ್ನು ಯೋಗೇಶ್ವರ್ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಯಾಗಲಿದ್ದಾರೆ ಎಂಬ ಭರವಸೆ ಮೂಡಿದೆ. ಈ ನಿಟ್ಟಿನಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ.ರೇವಣ್ಣ ಬೆಂಬಲಿಸುವಂತೆ ಕರ ಪತ್ರ ಮುದ್ರಿಸಲಾಗಿದೆ.

ತುಮಕೂರು: ಕಾಂಗ್ರೆಸ್ ಗೆ ಇಲ್ಲ ಹಿಂದುಳಿದ ವರ್ಗದ ಮತ

ಗೆಲುವಿನ ಕನಸಿನಲ್ಲಿದ್ದ ಕಾನೂನು ಸಚಿವ ಟಿ.ಬಿ.ಜಯಚಂದ್ರಗೆ ಸಂಕಷ್ಟ ಎದುರಾಗಿದೆ.
ಹಿಂದುಳಿದ ವರ್ಗಗಳ ಮತವನ್ನು ಕಾಂಗ್ರೆಸ್ ಗೆ ಹಾಕದಿರಲು ಸಮುದಾಯದ ಸ್ವಾನಿಜಿಗಳು ಕರೆ ಕೊಟ್ಟಿದ್ದಾರೆ. ಇದರ ಪರಿಣಾಮ ನೇರವಾಗಿ ಸಚಿವ ಜಯಚಂದ್ರರ ಮೇಲೆ ಬೀಳಲಿದೆ.

ಶಿರಾ ಕ್ಷೇತ್ರದ ಮಾಗೋಡಿನಲ್ಲಿ ಸಭೆ ಸೇರಿದ ಹಿಂದುಳಿದ ವರ್ಗಗಳ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ,
ಮಡಿವಾಳ ಮಾಚಿದೇವ ಶ್ರೀಗಳು ಹಾಗೂ ಸಂಗಣ್ಣ ಬಸವಾನಂದ ಸ್ವಾಮೀಜಿಗಳು ಕಾಂಗ್ರೆಸ್ ಗೆ ಮತಹಾಕದಿರಲು ನಿರ್ಧರಿಸಿದ್ದಾರೆ. ಬದಲಾಗಿ ಪಕ್ಷೇತರ ವಾಗಿ ಸ್ಪರ್ಧಿಸಿದ ಯಾದವ ಸಮುದಾಯದ ಸಿ.ಎಂ.ನಾಗರಾಜುಗೆ ಬೆಂಬಲಿಸಲು ನಿರ್ಣಯ ಕೈಗೊಂಡಿದ್ದಾರೆ. ಅಲ್ಲದೆ ಎಲ್ಲಾ ಸ್ವಾನಿಜಿಗಳು ಸಿಎಂ ನಾಗರಾಜು ಪರ ಪ್ರಚಾರದಲ್ಲಿ ಕೂಡಾ ಪಾಲ್ಗೊಂಡು ಮತಯಾಚಿಸಿದ್ದಾರೆ. ಈ ವೇಳೆ ಮಾತನಾಡಿದ ಶ್ರೀಕೃಷ್ಣ ಯಾದವಾನಂದ ಸ್ವಾಮಿಜಿಗಳು,
ಕಾಂಗ್ರೆಸ್ ಸರ್ಕಾರದಿಂದ ಅಹಿಂದ ವರ್ಗಕ್ಕೆ ಯಾವುದೇ ಪ್ರಯೋಜವಾಗಿಲ್ಲ, ಅಧಿಕಾರಕ್ಕೆ ಬರುವವರೆಗೆ ಮಾತ್ರ ಅಹಿಂದ ಮಂತ್ರ ಜಪಿಸಿದ್ರು,
ಬಳಿಕ ಅಹಿಂದ ವರ್ಗವನ್ನ ಸಂಪೂರ್ಣ ಮರೆತ್ರು ಎಂದು ಕಿಡಿಕಾರಿದ್ದಾರೆ. ಅಹಿಂದ ವರ್ಗಕ್ಕೆ ಇನ್ನೂ ಅನ್ಯಾಯವಾಗುತಿದೆ ಹಾಗಾಗಿ ಈ ನಿರ್ಣಯಕ್ಕೆ ಬಂದಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ