ಗರಿಯಾಬಂದ್ (ಛತ್ತೀಸ್‍ಗಢ), ಮೇ 3-ನಕ್ಸಲರ ಹಿಂಸಾಚಾರದಿಂದ ನಲುಗುತ್ತಿರುವ ಛತ್ತೀಸ್‍ಗಢದಲ್ಲಿ ಒಂದೆಡೆ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ಮುಂದುವರಿಸಿದ್ದರೆ, ಇನ್ನೊಂದೆಡೆ ಯೋಧರನ್ನು ಗುರಿಯಾಗಿಟ್ಟುಕೊಂಡು ಬಂಡುಕೋರರು ದಾಳಿ ತೀವ್ರಗೊಳಿಸಿದ್ದಾರೆ. ಗರಿಯಾಬಂದ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ನಕ್ಸಲರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಬಳಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಪೆÇಲೀಸರು ಹುತಾತ್ಮರಾಗಿದ್ದಾರೆ. ಮೈನ್‍ಪುರ್ ಪೆÇಲೀಸ್ ಠಾಣೆ ವ್ಯಾಪ್ತಿಯ ಒಧ್ ಗ್ರಾಮದ ಬಳಿ 2.30ರ ನಸುಕಿನಲ್ಲಿ ಈ ಸ್ಫೋಟ ಸಂಭವಿಸಿದೆ.
ಕಾನ್ಸ್‍ಟೆಬಲ್‍ಗಳಾದ ಲೇಖ್‍ರಾಮ್ ಮತ್ತು ಭೋಜ್‍ಸಿಂಗ್ ಅವರು ಛತ್ತೀಸ್‍ಗಡ-ಒಡಿಶಾ ಗಡಿ ಭಾಗದ ಅರಣ್ಯ ಮಾರ್ಗದಲ್ಲಿ ಮೋಟಾರ್‍ಸೈಕಲ್‍ನಲ್ಲಿ ತೆರಳುತ್ತಿದ್ಧಾಗ ನಕ್ಸಲರು ನೆಲಬಾಂಬ್ ಸ್ಪೋಟಿಸಿ ನಂತರ ಅವರ ಮೇಲೆ ಗುಂಡಿನ ಮಳೆಗರೆದರು. ಈ ದಾಳಿಯಲ್ಲಿ ಅವರಿಬ್ಬರು ಹುತಾತ್ಮರಾದರು ಎಂದು ಪೆÇಲೀಸ್ ಮಹಾ ನಿರೀಕ್ಷಕ(ರಾಯ್‍ಪುರ್ ವಲಯ) ಪ್ರದೀಪ್ ಗುಪ್ತಾ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ನಕ್ಸಲರಿಗಾಗಿ ಬೇಟೆ ಕಾರ್ಯಾಚರಣೆ ಮುಂದುವರಿದಿದೆ.