ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನಡುವೆ ಕಳೆದ ವಾರ ನಡೆದ ಶೃಂಗಸಭೆ ಫಲ:

ಬೀಜಿಂಗ್, ಮೇ 2-ವುಹಾನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನಡುವೆ ಕಳೆದ ವಾರ ನಡೆದ ಶೃಂಗಸಭೆ ಫಲ ನೀಡಲು ಆರಂಭಿಸಿದೆ.
ಭಾರತ ಮತ್ತು ಚೀನಾ ಸೇನೆ ತಮ್ಮ ಕೇಂದ್ರ ಕಚೇರಿಗಳಲ್ಲಿ ಪರಸ್ಪರ ಹಾಟ್‍ಲೈನ್ ಸಂಪರ್ಕ ಕಲ್ಪಿಸಲು ಸಮ್ಮತಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಇದರೊಂದಿಗೆ ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಪ್ರಸ್ತಾವನೆಗೆ ಚಾಲನೆ ದೊರೆತಂತಾಗಿದೆ.
ಉಭಯ ದೇಶಗಳ ನಾಯಕರು ಔಪಚಾರಿಕ ಮಾತುಕತೆ ವೇಳೆ, ತಮ್ಮ ಮಿಲಿಟರಿ ಕೇಂದ್ರ ಕಚೇರಿಗಳ ನಡುವೆ ಹಾಟ್‍ಲೈನ್ ವ್ಯವಸ್ಥೆ ಸ್ಥಾಪಿಸಲು ಸಮ್ಮತಿ ಸೂಚಿಸಿದ್ದರು. ಅದರ ಫಲಶ್ರುತಿಯಾಗಿ ಈ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ಚೀನಾದ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಇಂದು ವರದಿ ಮಾಡಿದೆ.
ಪರಸ್ಪರ ವಿಶ್ವಾಸ ವೃದ್ದಿ ಮತ್ತು ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಇದೊಂದು ಪೂರಕ ಕ್ರಮವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ