ಶಹಜಾನ್ಪುರ್, ಮೇ 2- ದುಶ್ಚಟ್ಟಕ್ಕೆ ದಾಸಾನುದಾಸನಾಗಿದ್ದ ವ್ಯಸನಿಯೊಬ್ಬ ಕುಡಿತಕ್ಕೆ ಅಡ್ಡಿಪಡಿಸಿದ ತನ್ನ ಪತ್ನಿಯ ಮೂಗನ್ನೇ ಕತ್ತರಿಸಿದ ಹೇಯ ಕೃತ್ಯ ಉತ್ತರ ಪ್ರದೇಶದ ಬಹದ್ದೂರ್ ಗ್ರಾಮದಲ್ಲಿ ನಡೆದಿದೆ.
ಸಂಗೀತಾ(35) ಎಂಬ ಮಹಿಳೆ ತನ್ನ ಗಂಡ ರಾಜೇಶ್ ಕುಮಾರ್ ಎಂಬಾತನಿಗೆ ಮದ್ಯ ಸೇವಿಸದಂತೆ ತಡೆದಳು. ಮೊದಲೇ ಪಾನಮತ್ತನಾಗಿದ್ದ ಆತ ಕುಪಿತಗೊಂಡು ಆಕೆಯ ಮೂಗು ಕತ್ತರಿಸಿದ. ಆಕೆಯನ್ನು ನೆರೆಹೊರೆಯವರು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜೇಶ್ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.