ನವದೆಹಲಿ, ಮೇ 2- ಜ್ಯೇಷ್ಠತೆಯಲ್ಲಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರು ಅತ್ಯುನ್ನತ ಎಂಬುದು ನಿರ್ವಿವಾದ. ಆದರೆ, ಪ್ರಕರಣಗಳ ಹಂಚಿಕೆ ಮನಸೋಇಚ್ಚೆ ಇರದೆ ನ್ಯಾಯಸಮ್ಮತವಾಗಿರಬೇಕು ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧ ಅಭಿಪ್ರಾಯಪಟ್ಟಿದ್ದಾರೆ.
ಹಿರಿಯ ಪತ್ರಕರ್ತ ಅರುಣ್ಶೌರಿ ಅವರ ಅನಿತಾ ಗೆಟ್ಸ್ ಬೇಲ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಕರಣಗಳ ಹಂಚಿಕೆಗೆ ಸಂಬಂಧಪಟ್ಟಂತೆ ಐವರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿರುದ್ಧ ಬಹಿರಂಗ ಆರೋಪ ಮಾಡಿದ್ದು, ಘನಘೋರವಾಗಿದೆ.
ಈ ಪರಿಸ್ಥಿತಿಯನ್ನು ಬಗೆಹರಿಸಲು ಸಂಘಟಿತ ನಾಯಕತ್ವದ ಅಗತ್ಯವಿದೆ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವ, ರಾಜತಾಂತ್ರಿಕತೆ ಪ್ರದರ್ಶಿಸುವ ವ್ಯವಸ್ಥೆಯನ್ನು ಬೆಳೆಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ಮಿಶ್ರ ಅವರಿಗೆ ಲೋಧ ಸಲಹೆ ನೀಡಿದರು.