ಮೈಸೂರು, ಮೇ 2- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದೇ ಖ್ಯಾತಿಯಾಗಿರುವ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಫೇಸ್‍ಬುಕ್ ವಾರ್ ನಡೆದಿದೆ.
ಒಂದು ರೀತಿಯಲ್ಲಿ ಫೇಸ್‍ಬುಕ್‍ವಾರ್ ವಯಕ್ತಿಕ ತೇಜೋವಧೆಗೆ ಚಾಮುಂಡೇಶ್ವರಿ ಕ್ಷೇತ್ರ ವೇದಿಕೆಯಾಗಿದೆ. ಶ್ರೀರಾಮಪುರ ಗ್ರಾಪಂನ ಜೆಡಿಎಸ್ ಉಪಾಧ್ಯಕ್ಷೆ ಉಷಾರಾಣಿ, ಕಾಂಗ್ರೆಸ್ ಮುಖಂಡನಿಗೆ ಕಮೆಂಟ್ ಮಾಡಿದ್ದಾರೆ. ಕಾಂಗ್ರೆಸ್‍ನ ರಾಚಪ್ಪಾಜಿ ಎಂಬುವರಿಗೆ ಉಷಾರಾಣಿ ಅವರು ಕಂಡವರ ದುಡ್ಡಿನಲ್ಲಿ ಎಷ್ಟುದಿನ ಶೋಕಿ ಎಂದು ಕಮೆಂಟ್ ಹಾಕಿದ್ದಾರೆ.
ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹಾಗೆಯೇ ಇತ್ತೇಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಶ್ರೀರಾಮಪುರ ಗ್ರಾಪಂ ಅಧ್ಯಕ್ಷೆ ಚೂಡಾಮಣಿ ಅವರನ್ನು ನಿಂದಿಸಿ ಕಮೆಂಟ್ ಮಾಡಲಾಗಿದೆ. ಚೂಡಾಮಣಿ ನಮ್ಮ ಪಕ್ಷದಲ್ಲಿದ್ದು, ನೀವ್ಯಾಕೆ ಕರೆದೊಯ್ದಿರಿ ಎಂದು ಉಷಾ ಕಮೆಂಟ್ ಮಾಡಿದ್ದಾರೆ.