ದಾವಣಗೆರೆ, ಮೇ 2- ಚುನಾವಣಾ ಸಂಬಂಧ ನಿರ್ಮಿಸಲಾಗಿರುವ ಮೂರು ಚೆಕ್ಪೆÇೀಸ್ಟ್ನಲ್ಲಿ 2.72ಲಕ್ಷ ರೂ. ಪತ್ತೆ ಹಚ್ಚಲಾಗಿದೆ.
ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಚೆಕ್ಪೆÇೀಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಎಸ್ಎಸ್ಟಿ ತಂಡದ ಅಧಿಕಾರಿ ರಾಜ ಎಂಬುವರು ಈ ಮಾರ್ಗವಾಗಿ ಬಂದ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ದಾಖಲೆ ರಹಿತ 1.44 ಲಕ್ಷ ರೂ. ಹಣ ಪತ್ತೆಯಾಗಿದೆ.
ಈ ಸಂಬಂಧ ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ದುರ್ಗಪ್ಪ ಅವರನ್ನು ವಶಕ್ಕೆ ತೆಗೆದುಕೊಂಡು ಹಣದ ದಾಖಲೆ ಬಗ್ಗೆ ವಿಚಾರಣೆಗೊಳಪಡಿಸಿದ್ದಾರೆ. ಅದೇ ರೀತಿ ಮತ್ತೊಂದು ಚೆಕ್ಪೆÇೀಸ್ಟ್ನಲ್ಲಿ ಕಾರಟಗಿ ಪಟ್ಟಣದ ಮಂಜುನಾಥ್ ಎಂಬುವರಿಂದ ದಾಖಲೆ ಇಲ್ಲದ 60 ಸಾವಿರ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಹರಪನಹಳ್ಳಿ ಸಮೀಪದ ಕಾನಳ್ಳಿ ಚೆಕ್ಪೆÇೀಸ್ಟ್ನಲ್ಲಿ ಎಸ್ಎಸ್ಟಿ ಅಧಿಕಾರಿ ನಾಗರಾಜ್ ಅವರು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರೊಂದರಲ್ಲಿದ್ದ 60,000ರೂ.ವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹೂವಿನ ಹಡಗಲಿ ಪಟ್ಟಣದ ಮರ್ದನ್ಸಾಬ್ ಎಂಬುವರು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ದಾಖಲೆ ರಹಿತ 68,500ರೂ. ಪತ್ತೆಹಚ್ಚಿ ಇವರನ್ನು ವಿಚಾರಣೆಗೊಳಪಡಿಸಿದ್ದಾರೆ. ವಶಪಡಿಸಿಕೊಂಡಿರುವ ದಾಖಲೆ ರಹಿತ ನಗದು ಹಾಗೂ ವಸ್ತುಗಳನ್ನು ಹರಪನಹಳ್ಳಿ ಖಜಾನೆಯಲ್ಲಿರಿಸಲಾಗಿದೆ.