ಮತದಾರರು ಈ ಭಾರಿ ಬದಲಾವಣೆ ಬಯಸಿದ್ದಾರೆ – ಬಿಜೆಪಿ ಅಭ್ಯರ್ಥಿ ಜಿ.ಎನ್.ಬೆಟ್ಟಸ್ವಾಮಿ

ಗುಬ್ಬಿ ,ಮೇ1- ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಅಡಳಿತ ಎರಡು ಕುಸಿದಿದ್ದು ಮತದಾರರು ಈ ಭಾರಿ ಬದಲಾವಣೆ ಬಯಸಿದ್ದಾರೆ. ಕಳೆದ 26 ವರ್ಷಗಳಿಂದ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಮಗ್ರವಾದ ಮಾಹಿತಿ ಇದ್ದು ಕ್ಷೇತ್ರದ ಮತದಾರರು ಈ ಭಾರಿ ಸಂಪೂರ್ಣ ಸಹಕಾರ ನೀಡಿದರೆ ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃಧ್ದಿ ಪಡಿಸುವುದರ ಜೊತೆಗೆ ತಾಲ್ಲೂಕಿನ ಗುಬ್ಬಿ, ಕಡಬ ಸೇರಿದಂತೆ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೆ ನನ್ನ ಮುಖ್ಯ ಗುರಿಯಾಗಿದೆ. ಕ್ಷೇತ್ರದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರು ಪೂರ್ಣ ಪ್ರಮಾಣದ ಸಹಕಾರ ಮಾಡಲು ಮುಂದಾಗಿದ್ದಾರೆ. ಮಾಜಿ ಸಂಸದ ಜಿ.ಎಸ್‍ಬಸವರಾಜುರವರ ಅಭಿವೃದ್ಧಿ ಪರಿಕಲ್ಪನೆಯನ್ನು ಅನುಷ್ಠಾನ ಮಾಡುವ ಮೂಲಕ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃಧ್ದಿ ಮಾಡಲಾಗುವುದೆಂದು ಎಂದು ತಿಳಿಸಿದರು.
ನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಬಿ.ಕೃಷ್ಣಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳು ಮತ್ತು ಯಡಿಯೂರಪ್ಪನವರು ರಾಜ್ಯದಲ್ಲಿ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ರೂಪಿಸಿದ ಹಲವಾರು ಜನಪರ ಯೋಜನೆಗಳು ಪ್ರಸಕ್ತ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ ಎಂದು ತಿಳಿಸಿದರು.
ಇಂದು ಸಂಜೆ 4 ಗಂಟೆಗೆ ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದ ಆರ್ಚ್‍ನಿಂದ ಬಿ.ಹೆಚ್.ರಸ್ತೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೃಹತ್ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ಮನವಿ ಮಾಡಿದ್ದಾರೆ.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಅ.ನ.ಲಿಂಗಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಹೆಚ್.ಜಗನ್ನಾಥ್, ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಜಿ.ಆರ್.ಶಿವಕುಮಾರ್, ವರ್ತಕ ಸಿ.ಎಂ.ಶರಶ್ಚಂದ್ರ ಬೋಸ್, ಪಿ.ಬಿ.ಚಂದ್ರಶೇಖರಬಾಬು, ಮುಖಂಡರಾದ ಎಸ್.ವಿಜಯ್‍ಕುಮಾರ್, ಎಸ್.ನಂಜೇಗೌಡ, ಯಜಮಾನ್ ನಿಜಲಿಂಗಪ್ಪ, ಸೋಮಶೇಖರಪ್ಪ, ಲಕ್ಷ್ಮೀನರಸಿಯಪ್ಪ, ಬಿಎಸ್.ಎನ್.ಎಲ್.ಕೃಷ್ಣಪ್ಪ, ಬಾಲಕೃಷ್ಣಮೂರ್ತಿ, ಜಿ.ಎನ್.ಅಣ್ಣಪ್ಪಸ್ವಾಮಿ, ವಿರೂಪಾಕ್ಷ, ಜಿ.ಸಿ.ಕೃಷ್ಣಮೂರ್ತಿ, ಬಲರಾಮಣ್ಣ, ನಂದಿಕೋಲು ಕುಮಾರ್, ಕೃಷ್ಣಪ್ಪ, ಕುಮಾರ್, ಬಿ.ಎಸ್.ಚಂದ್ರಮೌಳಿ, ಪ್ರಸನ್ನಕುಮಾರ್,ಬಸವರಾಜು, ಸಿದ್ದೇಶ್, ಮುಂತಾದವರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ