ಬಿಜೆಪಿ ಅಂದರೆ ಭ್ರಷ್ಟ ಜನಾರ್ಧನ ಪಾರ್ಟಿ: ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‍ಸಿಂಗ್ ಸುರ್ಜೆವಾಲಾ

ಬೆಂಗಳೂರು, ಮೇ 1- ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಮೇಲೆ 38 ಕ್ರಿಮಿನಲ್ ಕೇಸುಗಳಿವೆ. ಜತೆಗೆ ಅವರ ಪಕ್ಷದಲ್ಲಿ ಮುಂಚೂಣಿಯಲ್ಲಿರುವ 10 ನಾಯಕರ ಮೇಲೂ ಕ್ರಿಮಿನಲ್ ಕೇಸುಗಳಿದ್ದು, ಕರ್ನಾಟಕದ ಜನತೆ ಇಂತಹವರಿಗೆ ರಾಜ್ಯಭಾರ ನೀಡಬೇಕೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‍ಸಿಂಗ್ ಸುರ್ಜಾವಾಲಾ ಪ್ರಶ್ನಿಸಿದರು.
ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಜೆಪಿ ಅಂದರೆ ಭ್ರಷ್ಟ ಜನಾರ್ಧನ ಪಾರ್ಟಿ ಎಂದು ವಿಶ್ಲೇಷಿಸಿದರು.

ಇಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆಗೆ ಪ್ರಚಾರ ಮಾಡಲು ಆಗಮಿಸಿದ್ದಾರೆ. ಅವರು ಸಾಕಷ್ಟು ಬಾರಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುತ್ತಾರೆ. ಇದೇ ರೀತಿ ಕರ್ನಾಟಕದ ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಬೇಕು ಎಂದು ಹೇಳಿದರು.

ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಅವರ ಮೇಲೆ ಭ್ರಷ್ಟಾಚಾರ, ವಂಚನೆ ಸೇರಿದಂತೆ ವಿವಿಧ ಆರೋಪಗಳಿವೆ. 23 ಪ್ರಕರಣಗಳು ದಾಖಲಾಗಿ ವಿಚಾರಣಾ ಹಂತದಲ್ಲಿವೆ. ಸುಪ್ರೀಂಕೋರ್ಟ್‍ನಲ್ಲಿ 15 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಒಟ್ಟು 38 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ , ರಾಜ್ಯದ ಮುಖ್ಯಮಂತ್ರಿ ಆಗಬೇಕೆ ಎಂದು ಪ್ರಶ್ನಿಸಿದರು.

ಇವರಲ್ಲದೆ ಬಿಜೆಪಿ ಮುಂಚೂಣಿಗೆ ಬಿಟ್ಟಿರುವ 10 ಮಂದಿ ನಾಯಕರ ಮೇಲೂ ಕ್ರಿಮಿನಲ್ ಕೇಸುಗಳಿವೆ. ಬಾದಾಮಿ ಮತ್ತು ಮೊಣಕಾಲ್ಮೂರು ಕ್ಷೇತ್ರದ ಅಭ್ಯರ್ಥಿ
ಕರ್ನಾಟಕದ ಜನತೆ ಇಂತಹವರಿಗೆ ರಾಜ್ಯಭಾರ ನೀಡಬೇಕೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‍ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದರು.
ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಜೆಪಿ ಅಂದರೆ ಭ್ರಷ್ಟ ಜನಾರ್ಧನ ಪಾರ್ಟಿ ಎಂದು ವಿಶ್ಲೇಷಿಸಿದರು.

ಇಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆಗೆ ಪ್ರಚಾರ ಮಾಡಲು ಆಗಮಿಸಿದ್ದಾರೆ. ಅವರು ಸಾಕಷ್ಟು ಬಾರಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುತ್ತಾರೆ. ಇದೇ ರೀತಿ ಕರ್ನಾಟಕದ ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಬೇಕು ಎಂದು ಹೇಳಿದರು.

ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಅವರ ಮೇಲೆ ಭ್ರಷ್ಟಾಚಾರ, ವಂಚನೆ ಸೇರಿದಂತೆ ವಿವಿಧ ಆರೋಪಗಳಿವೆ. 23 ಪ್ರಕರಣಗಳು ದಾಖಲಾಗಿ ವಿಚಾರಣಾ ಹಂತದಲ್ಲಿವೆ. ಸುಪ್ರೀಂಕೋರ್ಟ್‍ನಲ್ಲಿ 15 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಒಟ್ಟು 38 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ , ರಾಜ್ಯದ ಮುಖ್ಯಮಂತ್ರಿ ಆಗಬೇಕೆ ಎಂದು ಪ್ರಶ್ನಿಸಿದರು.

ಇವರಲ್ಲದೆ ಬಿಜೆಪಿ ಮುಂಚೂಣಿಗೆ ಬಿಟ್ಟಿರುವ 10 ಮಂದಿ ನಾಯಕರ ಮೇಲೂ ಕ್ರಿಮಿನಲ್ ಕೇಸುಗಳಿವೆ. ಬಾದಾಮಿ ಮತ್ತು ಮೊಣಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಮೇಲೆ ಮೂರು ಪ್ರಕರಣ, ಜನಾರ್ದನರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ ಮೇಲೆ ಐದು ಕ್ರಿಮಿನಲ್ ಪ್ರಕರಣ, ಶ್ರೀರಾಮುಲು ಸಂಬಂಧಿ ಸುರೇಶ್‍ಬಾಬು ಮೇಲೆ ಆರು ಕ್ರಿಮಿನಲ್ ಕೇಸು, ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮೇಲೆ ನಾಲ್ಕು ಕ್ರಿಮಿನಲ್ ಕೇಸುಗಳಿವೆ. ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಸಿ.ಟಿ.ರವಿ ಮೇಲೆ ಮೂರು ಕ್ರಿಮಿನಲ್ ಕೇಸುಗಳಿವೆ. ಬಿಳಗಿ ಕ್ಷೇತ್ರದ ಅಭ್ಯರ್ಥಿ ಮುರುಗೇಶ್ ನಿರಾಣಿ ಮೇಲೆ ಎರಡು, ಮಾಲೂರು ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿ ಮೇಲೆ 4 ಕ್ರಿಮಿನಲ್ ಕೇಸುಗಳು, ದೇವದುರ್ಗ ಕ್ಷೇತ್ರದ ಅಭ್ಯರ್ಥಿ ಶಿವನಗೌಡ ನಾಯಕ್ ಮೇಲೆ 4, ಪದ್ಮನಾಭನಗರದ ಆರ್.ಅಶೋಕ್ ಮೇಲೆ 2, ಸಂಸದೆ ಶೋಭಾ ಕರಂದ್ಲಾಜೆ ಮೇಲೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ 1 ಪ್ರಕರಣ ದಾಖಲಾಗಿದೆ.

ಇವರುಗಳ ಕೈಗೆ ರಾಜ್ಯದ ಅಧಿಕಾರ ನೀಡಲು ಕನ್ನಡಿಗರು ಒಪ್ಪುತ್ತಾರೆಯೇ? ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಠಿತ್ ಷಾ ದೇಶದ ಜನರನ್ನು ಮೂರ್ಖರೆಂದು ಭಾವಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

35 ಸಾವಿರ ಕೋಟಿ ರೂ.ಗಳ ಗಣಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜನಾರ್ದನರೆಡ್ಡಿಗೆ ಕ್ಲೀನ್‍ಚಿಟ್ ನೀಡಲು ಸಿಬಿಐ ಹಗಲು-ರಾತ್ರಿ ಶ್ರಮಿಸಿದೆ. ಕೊನೆಗೆ ಸಿಬಿಐ ಗೋವಾ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ದಾಖಲಾಗಿದ್ದ ಆರು ಪ್ರಮುಖ ಕೇಸುಗಳನ್ನು ಸಿಬಿಐ ಕೈಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಈಗ ಜನಾರ್ದನರೆಡ್ಡಿ ಬಿಜೆಪಿ ಪ್ರಚಾರ ಸಮಿತಿಯ ಪ್ರಧಾನ ವ್ಯವಸ್ಥಾಪಕರಂತೆ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೂ, ಜನಾರ್ದನರೆಡ್ಡಿಗೂ ಸಂಬಂಧವಿಲ್ಲವೆಂದು ಅಮಿತ್ ಷಾ ಹೇಳಿದರೆ ಬಿಎಸ್‍ವೈ ಮತ್ತು ಇತರ ಬಿಜೆಪಿ ನಾಯಕರು ಜನಾರ್ಧನರೆಡ್ಡಿ ಜತೆ ವೇದಿಕೆ ಹಂಚಿಕೊಳ್ಳುತ್ತಾರೆ. ಇಂತಹ ದ್ವಂದ್ವಗಳ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಗಣಿ ಹಗರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ವಿಶೇಷ ತನಿಖಾ ದಳ ರಚನೆ ಮಾಡಿದೆ. ಮುಂದಿನ ದಿನಗಳಲ್ಲಿ ಗಣಿ ಕೇಸುಗಳನ್ನು ಎಸ್‍ಐಟಿ ಸಮಗ್ರವಾಗಿ ತನಿಖೆ ನಡೆಸಲಿದೆ ಎಂದು ಹೇಳಿದರು.

ಬಿ.ಆನಂದ್‍ಸಿಂಗ್ ಅವರನ್ನು ಕಾಂಗ್ರೆಸ್‍ಗೆ ಸೇರಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗುತ್ತದೆ. ಇದು ತನಿಖೆ ಹಂತದಲ್ಲಿದೆ. ಕಾಂಗ್ರೆಸ್ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಡಿನ ಸಂಪತ್ತನ್ನು ಲೂಟಿ ಮಾಡಿದವರಿಗೆ ಶಿಕ್ಷೆ ಕೊಡಿಸಲಾಗುತ್ತದೆ ಎಂದರು.
ಸಿದ್ದರಾಮಯ್ಯ ಅವರ ಪುತ್ರನಿಗೆ ಟಿಕೆಟ್ ಕೊಟ್ಟಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಮತ್ತು ಅಮಿತ್ ಷಾ ಜೋಡಿ ಬಿಜೆಪಿಯಲ್ಲಿ ಸಂಬಂಧಿಕರಿಗೆ, ಹಿಂಬಾಲಕರಿಗೆ, ತಮಗೆ ಬೇಕಾದ ಮುಖಂಡರಿಗೆ ಟಿಕೆಟ್ ಕೊಡಿಸಿರುವುದನ್ನು ಮರೆತಂದಿದೆ ಎಂದು ಲೇವಡಿ ಮಾಡಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಚತುರ್ವೇದಿ, ಕಾರ್ಯದರ್ಶಿ ಸಂದೀಪ್‍ಸಿಂಗ್, ಕೆಪಿಸಿಸಿ ರಾಜ್ಯ ಮಾಧ್ಯಮ ವಿಭಾಗದ ಅಧ್ಯಕ್ಷ ರಾಧಾಕೃಷ್ಣ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.
ಕೆ.ಜೆ.ಜಾರ್ಜ್ ಅವರು ತಮ್ಮ ಬದಲಿಗೆ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮಾತನಾಡಲಿ ಎಂದು ಸಲಹೆ ನೀಡಿದರು. ಸಂವಾದ ಆರಂಭಕ್ಕೂ ಮುನ್ನ ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಈಶ್ವರಪ್ಪ ಮತ್ತಿತರರು ಬಿಜೆಪಿ ಇಬ್ಭಾಗವಾದಾಗ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿರುವ ವಿಡಿಯೋ ತುಣುಕುಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ