ಬೆಂಗಳೂರು, ಮೇ 1- ಚುನಾವಣಾ ಚೆಕ್ಪೆÇೀಸ್ಟ್ ಬಳಿ ವಾಹನದಲ್ಲಿದ್ದ 20 ಲಕ್ಷ ರೂ. ಹಣವನ್ನು ಚುನಾವಣಾ ಅಧಿಕಾರಿಗಳು ಹಾಗೂ ಪೆÇಲೀಸರು ಪತ್ತೆಹಚ್ಚಿದ್ದಾರೆ.
ದೇವನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಕೋಡಿ ಮಂಚೇನಹಳ್ಳಿ ಚುನಾವಣಾ ಚೆಕ್ಪೆÇೀಸ್ಟ್ನಲ್ಲಿ ನಿನ್ನೆ ಚುನಾವಣಾ ಅಧಿಕಾರಿಗಳು ಹಾಗೂ ಪೆÇಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಈ ಮಾರ್ಗವಾಗಿ ಬಂದ ಬುಲೆರೋ ವಾಹನವನ್ನು ತಡೆದು ಪರಿಶೀಲಿಸಿದಾಗ 20 ಲಕ್ಷ ರೂ. ಪತ್ತೆಯಾಗಿದೆ.
ಎಟಿಎಂಗೆ ತುಂಬಲು ಈ ಹಣವನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದುದಾಗಿ ವಾಹನದಲ್ಲಿದ್ದವರು ಹೇಳಿದರಾದರೂ ಸೂಕ್ತ ದಾಖಲೆಗಳಿಲ್ಲದ ಕಾರಣ ಹಣ ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂಬಂಧ ದೇವನಹಳ್ಳಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.