ಬೀದರ್.:ಮೆ.01. ಔರಾದ್ ಕ್ಷೇತ್ರದಲ್ಲಿ ಶಾಸಕ ಪ್ರಭು ಚವ್ಹಾಣ್ ಅವರ ವಿರೋಧಿ ಅಲೆಯಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಔರಾದ್ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೌಡಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಕ್ಷೇತ್ರದ ಮುರ್ಕಿ, ವಾಗನಗೇರಾ, ಶಿವಪೂರ, ಗಣೇಶಪೂರ, ಮುರ್ಕಿವಾಡಿ, ಬಾವರಗಾಂವ, ಸಾವರಗಾಂವ, ಬೋಂತಿ ಸೇರಿ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ, ದೀನ-ದಲಿತರ ಮತ್ತು ರೈತರ ಹಿತ ಕಾಪಾಡಿದೆ. ಎಲ್ಲ ವರ್ಗದವರಿಗೆ ಮೇಲೆತ್ತಲು ಹಲವು ಯೋಜನೆ ಜಾರಿ ತಂದಿದೆ. ಹೀಗಾಗಿ ಜನತೆ ಪಕ್ಷದ ಪರ ಒಲವು ಹೊಂದಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಕಳೆದ ಹತ್ತು ವರ್ಷದ ಶಾಸಕ ಪ್ರಭು ಚವ್ಹಾಣ್ ಅವಧಿಯಲ್ಲಿ ಕ್ಷೇತ್ರದಲ್ಲಿ ಒಂದೂ ದೊಡ್ಡ ಕೆಲಸಗಳು ಆಗಿಲ್ಲ. ದಿನವೂ ಇಲ್ಲದೊಂದು ಸುಳ್ಳು ಹೇಳಿಕೆ ನೀಡಿ ಜನರಿಗೆ ದಿಕ್ಕು ತಪ್ಪಿಸಿದ್ದಾರೆ. ಈಗ ಜನ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಜಿಪಂ ಸದಸ್ಯ ಬಾಬುಸಿಂಗ್ ಹಜಾರಿ, ಪ್ರಮುಖರಾದ ಪ್ರಕಾಶ ಪಾಟೀಲ್, ರಾಮ ನರೋಟೆ, ಮನೋಜ ಬಿರಾದಾರ, ಚರಣಸಿಂಗ್ ರಾಠೋಡ, ಆನಂದ ಚವ್ಹಾಣ್, ಶಿವರಾಜ ನೀಲಂಗೆ, ಡಾ. ಉಮೇಶ ನಾಯಕ್ ಇತರರಿದ್ದರು.