ನನ್ನ ಗೆಲುವಿಗೆ ಸಹಕರಿಸಿದರರೆ, ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪಕ್ಷೇತರ ಅಭ್ಯರ್ಥಿ ಎಸ್.ಡಿ.ದಿಲೀಪ್‍ಕುಮಾರ್

ಗುಬ್ಬಿ,ಮೇ1-ಕಳೆದ ಹಲವು ವರ್ಷಗಳಿಂದ ಹಲವು ಸಮಾಜ ಸೇವಾ ಕಾರ್ಯಗಳ ಜೊತೆಗೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ನನ್ನ ಗೆಲುವಿಗೆ ಸಹಕರಿಸಿದರರೆ ಕ್ಷೇತ್ರದ ಚಿತ್ರಣವನ್ನೆ ಸಮಗ್ರವಾಗಿ ಬದಲಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪಕ್ಷೇತರ ಅಭ್ಯರ್ಥಿ ಎಸ್.ಡಿ.ದಿಲೀಪ್‍ಕುಮಾರ್ ತಿಳಿಸಿದರು.
ಪಟ್ಟಣದ ಶ್ರೀಬಿದ್ದಾಂಜನೇಯಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ಷೇತ್ರದ ಜನತೆ ಈ ಭಾರಿ ಬದಲಾವಣೆ ಬಯಸಿದ್ದು ಕ್ಷೇತ್ರದ ಮತದಾರರು ಉತ್ತಮ ಸಹಕಾರ ನೀಡಲು ಮುಂದಾಗಿದ್ದಾರೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃಧ್ದಿ ಪಡಿಸುವ ಉದ್ದೇಶ ಹೊಂದಿದ್ದು ಮತದಾರರು ಸಹಕಾರ ನೀಡಿದರೆ ಕ್ಷೇತ್ರವನ್ನು ಮಾದರಿ ಕ್ಷೇತ್ರನ್ನಾಗಿ ಮಾಡಲಾಗುವುದೆಂದು ಎಂದರು.
ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಮರ್ಪಕವಾದ ಯಾವುದೆ ಅಭಿವೃಧ್ದಿ ಕಾರ್ಯಗಳು ನಡೆದಿಲ್ಲ ಅಲ್ಲದೆ ಹಲವು ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ ಆಢಳಿತ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ ಅವರು, ತಾಲೂಕಿನ ಅಭಿವೃದ್ಧಿಗಾಗಿ ನಮ್ಮ ಆಧ್ಯತೆಗಳಾದ ತಾಲೂಕಿನ ಎಲ್ಲ ಕೆರೆಗಳಿಗೂ ನೀರಾವರಿ ಒದಗಿಸುವುದು. ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ಮಾಡುವುದು. ಪ್ರತಿ ಗ್ರಾಮಗಳಿಗೂ ಶುಧ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ದೇವಾಲಯಗಳ ನಿರ್ಮಾಣ ಸೇರಿದಂತೆ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ತನ್ನದೆ ಆದ ಯೋಜನೆಯನ್ನು ರೂಪಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದ ಹಲವು ಮುಖಂಡರು ಎಸ್.ಡಿ.ದಿಲೀಪ್‍ಕುಮಾರ್ ಅವರೊಂದಿಗೆ ಸೇರ್ಪಡೆಗೊಂಡರು.
ಪಟ್ಟಣ ಪಂಚಾಯ್ತಿ ಸದಸ್ಯ ಲೋಕೇಶ್‍ಬಾಬು, ಮುಖಂಡರಾದ ಜಿ.ಹರಿವೇಸಂದ್ರ ಲೋಕೇಶ್, ಪ್ರಮೋದ್, ಶಿವಕುಮಾರ್, ಶಿವಣ್ಣ, ಸಿದ್ದರಾಮಣ್ಣ, ನಾಗರಾಜು, ಹರೀಶ್, ಗಿರೀಶ್, ಟ್ಯಾಂಕರ್ ನರಸಿಂಹಮೂರ್ತಿ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ