ಮೈಸೂರು,ಮೇ1- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದುದರಿಂದ ಬೇಸರಪಟ್ಟುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣನಾಗಿರುವ ಘಟನೆ ನಡೆದಿದೆ.
ರೂಪಾನಗರದ ವಾಸಿ ನಿಶಾಲ್ ನವಲೆ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ಕುಮಾರಬೀಡು ಬಳಿ ಇರುವ ಆರ್ಕಿಡ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ನಿನ್ನೆ ಮೊಬೈಲ್ ಮೂಲಕ ಆನ್‍ಲೈನ್‍ನಲ್ಲಿ ಪರೀಕ್ಷಾ ಫಲಿತಾಂಶ ವೀಕ್ಷಿಸಿದ್ದಾನೆ. ಒಂದು ವಿಷಯದಲ್ಲಿ ಅನುತ್ತೀರ್ಣನಾಗುವುದು ಗೊತ್ತಾಗಿ ಬೇಸರಪಟ್ಟುಕೊಂಡು ಕೊಠಡಿಯಲ್ಲಿ ಫ್ಯಾನ್‍ಗೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯವರು ಎಲ್ಲೆ ಹೋಗಿದ್ದವರು, ವಾಪಸ್ಸಾದಾಗ ನಿಶಾಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸರಸ್ವತಿಪುರಂ ಠಾಣೆ ಪೆÇಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.