ನವದೆಹಲಿ, ಮೇ 1-ಕಲ್ಲಿದ್ದಲು ಹಗರಣದ ಸಂಬಂಧ ಗೊಂಡ್ವಾನಾ ಇಸ್ಪಾಟ್ ಲಿಮಿಟೆಡ್ ನಿರ್ದೇಶಕ ಅಶೋಕ್ ದಾಗ ಅವರಿಗೆ ವಿಶೇಷ ನ್ಯಾಯಾಲಯವೊಂದ ಇಂದು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿಧಿಸಿದೆ.
ಮಹಾರಾಷ್ಟ್ರದಲ್ಲಿ ಮರ್ಜಾ ಕಲ್ಲಿದ್ದಲು ನಿಕ್ಷೇಪದ ಹಂಚಿಕೆಗೆ ಸಂಬಂಧಪಟ್ಟಂತೆ ಶಿಕ್ಷೆ ತೀರ್ಪು ಪ್ರಕಟಿಸಿದ ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್ ಅಶೋಕ್ ಅವರಿಗೆ ಸಜೆ ಮತ್ತು ದಂಡ ವಿಧಿಸಿದ್ದೇ ಅಲ್ಲದೇ ಕಂಪನಿಗೆ 60 ಲಕ್ಷ ರೂ. ಜುಲ್ಮಾನೆ ಹಾಕಿದರು.
ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಲ್ಲಿ ಕಂಪನಿ ಮತ್ತು ದಾಗ ದೋಷಿ ಎಂದು ಘೋಷಿಸಿದ್ದ ನಂತರ ಏಪ್ರಿಲ್ 27ರಿಂದ ಅವರು ಪೆÇಲೀಸ್ ಕಸ್ಟಡಿಯಲ್ಲಿದ್ದಾರೆ.