ತುಮಕೂರು,ಮೇ1-ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗಕ್ಕೆ ರಕ್ಷಣೆ ಸಿಗಬೇಕಾದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮಾತ್ರ ಸಾಧ್ಯ. ಬೇರೆ ಯಾವುದೇ ಸರ್ಕಾರ ಬಂದರೂ ರಕ್ಷಣೆ ಸಾಧ್ಯವಿಲ್ಲ ಎಂದು ನಗರ ಕ್ಷೇತ್ರದ ಅಭ್ಯರ್ಥಿ ಗೋವಿಂದರಾಜು ತಿಳಿಸಿದ್ದಾರೆ.
ನಗರದ ಹೊರಭಾಗದಲ್ಲಿರುವ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫಿಟ್ ವೆಲ್ ಫ್ಯಾಕ್ಟರಿಗೆ ಭೇಟಿ ನೀಡಿ , ಕಾರ್ಮಿಕರು ಹಾಗೂ ಮುಖಂಡರು ಸಮಸ್ಯೆಗಳು ಅಲಿಸಿದ ನಂತರ ಮಾತನಾಡಿದ ವರು, ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಈ ಬಾರಿ ಮತ್ತೆ ಬಂದಿದ್ದೇನೆ ನನಗೆ ಬೆಂಬಲಿಸಿದರೆ ನಿಮ್ಮಲ್ಲಿ ನಾನೂ ಒಬ್ಬನಾಗಿ ಕೆಲಸ ಮಾಡುತ್ತೇನೆ ಎಂದರು.
ಕಾರ್ಮಿಕರಿಗೆ ಭದ್ರತೆ, ಕುಟುಂಬದವರಿಗೆ ಆರೋಗ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಜೆಡಿಎಸ್ ಪಕ್ಷದ ವರಿಷ್ಠರು ಹಾಗೂ ಕುಮಾರಸ್ವಾಮಿ ಅವರು ತಂದಿರುವ ಪ್ರಣಾಳಿಕೆಯನ್ನು ಪೂರ್ಣಗೂಳಿಸುತ್ತಾರೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಕುಮಾರಣ್ಣ ಮುಖ್ಯ ಮಂತ್ರಿ ಅಗುವದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂದರು.
ಐದು ವರ್ಷಗಳ ಆಡಳಿತ ನಡೆಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಹಾಗೂ ಹಾಲಿ ನಗರ ಶಾಸಕ ಡಾ.ರಫೀಕ್ ಅಹ್ಮದ್ ಕಾರ್ಮಿಕರನ್ನು ನಿರ್ಲಕ್ಷಸಿದ್ದಾರೆ. ಇನ್ನು ಅತಿ ಕಡು ಬಡವರ ಮನೆಯಿಲ್ಲದೆ,ನಿವೇಶನಗಳು ಇಲ್ಲದೆ ತುಮಕೂರು ನಗರದ 35 ವಾರ್ಡಗಳಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರು ಅದನ್ನು ಪರಿ ಹರಿಸಲು ಶಾಸಕರು ಮುಂದಾಗಲಿಲ್ಲ ಎಂದು ದೂರಿದರು.
ಸರ್ಕಾರ ದಿಂದ ಕಾರ್ಮಿಕರ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ವಿಪಲ ರಾಗಿದ್ದರೆ ಎಂದು ಆರೋಪಿಸಿದರು ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಜಿ ಬಿ ಜ್ಯೋತಿ ಗಣೇಶ್ ಇಲ್ಲ ಸಲ್ಲದ ಅರೋಪವನ್ನು ನಮ್ಮ ಮೇಲೆ ಮಾಡುತ್ತಿದ್ದಾರೆ. ಅನಗತ್ಯವಾಗಿ ನಮ್ಮ ಮೇಲೆ ದೂರು ಹೇಳಿದ ಇದ್ದರೆ ಅವರಿಗೆ ಸಹಿಸಲೂ ಅಗುವುದಿಲ್ಲ. ಜನರ ಆಭೂತ ಪೂರ್ವ ಬೆಂಬಲ ನೋಡಿ ಸಹಿಸಲೂ ಅಗುವುದಿಲ್ಲಾ ಎಂದು ವಾಗ್ದಾಳಿ ನಡೆಸಿದರು ಇದೇ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ್ ಪ್ರಸಾದ್, ಪಾಲಿಕೆ ಸದಸ್ಯ ರು, ಬಾಲಕೃಷ್ಣ, ರಘು, ಇತರೆ ಮುಖಂಡರು ಭಾಗವಹಿಸಿದ್ದರು.
ಇತ್ತೀಚೆಗಷ್ಟೆ ಜೆಡಿಎಸ್‍ಗೆ ಸೇರ್ಪಡೆಯಾದ ಮಾಜಿ ಶಾಸಕ ಹೆಚ್.ನಿಂಗಪ್ಪ ಅವರು ಗೋವಿಂದ ರಾಜ್ ಅವರ ಜೂತೆ ಗೂಡಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ನಗರದ ಅಧ್ಯಕ್ಷ ಗುತ್ತಿಗೆದಾರ ನರಸೇಗೌಡರು,ಬೆಳ್ಳಿ ಲೋಕೇಶ್,ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಮುಖಂಡರು ಒಂದೆಡೆ ಸೇರಿ ಭಿನ್ನಾಭಿಪ್ರಾಯ ಮರೆತು ನಾವು ಎಲ್ಲಾರು ಒಂದಾಗಿದ್ದೇವೆ ನಮ್ಮಲ್ಲಿ ಯಾವುದೇ ಒಡಕು ಇಲ್ಲ ಎಂಬುದನ್ನು ಕಾರ್ಯಕರ್ತರಿಗೆ ಜನರಿಗೆ ಪಕ್ಷಕ್ಕೆ ಮನವರಿಕೆ ಮಾಡಿ ಕೊಟ್ಟರು.