ಬೆಂಗಳೂರು, ಏ.30- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರ ಮೊಬೈಲ್ಗಳನ್ನು ದರೋಡೆಕೋರರು ಎಗರಿಸಿದ್ದಾರೆ.
ವಿವೇಕನಗರ: ಮೊಬೈಲ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದ ಅಂಕಿತ್ ಎಂಬಾತನನ್ನು ಬೈಕ್ನಲ್ಲಿ ಹಿಂಬಾಲಿಸಿದ ಇಬ್ಬರು ದರೋಡೆಕೋರರು ಅವರ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಪಿಜಿಯೊಂದರಲ್ಲಿ ತಂಗುತ್ತಿದ್ದ ಅಂಕಿತ್ ರಾತ್ರಿ 12.50ರಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ಈಜಿಪುರದ ಮುಖ್ಯರಸ್ತೆ ಮೂಲಕ ಪಿಜಿಗೆ ಹೋಗುತ್ತಿದ್ದಾಗ ಇಬ್ಬರು ದರೋಡೆಕೋರರು ಬೈಕ್ನಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಮಾರತ್ತಹಳ್ಳಿ: ದೇವರಬೀಚನಹಳ್ಳಿಯ ಸಕ್ಕರೆ ಆಸ್ಪತ್ರೆ ಬಳಿ ಜಗದೀಶ್ ಎಂಬುವವರು ರಾತ್ರಿ 8.55ರಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದಾಗ ಬೈಕ್ನಲ್ಲಿ ಹಿಂಬಾಲಿಸಿದ ಇಬ್ಬರು ದರೋಡೆಕೋರರು ಇವರ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಈ ಸಂಬಂಧ ಜಗದೀಶ್ ಅವರು ರಾತ್ರಿ ಮಾರತ್ತಹಳ್ಳಿ ಠಾಣೆಗೆ ತೆರಳಿ ಮೌಖಿಕವಾಗಿ ದೂರು ನೀಡಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ಮೊಬೈಲ್ ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.